Latest

ಸರ್ಕಾರದಿಂದ ಲಿಖಿತ ರೂಪದಲ್ಲಿ ಭರವಸೆ; ಮುಷ್ಕರ ಹಿಂಪಡೆಯುವಂತೆ ಸಾರಿಗೆ ನೌಕರರಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ಕಾರ ತಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಮುಷ್ಕರ ಕೈಬಿಡುವುದಾಗಿ ಸಾರಿಗೆ ನೌಕರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಖಿತ ರೂಪದಲ್ಲಿ ಆದೇಶ ಪ್ರತಿಯನ್ನು ನೀಡುತ್ತಿದ್ದೆವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸವದಿ, ಸಾರಿಗೆ ನೌಕರರ 10 ಬೇಡಿಕೆಗಳ ಪೈಕಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೇವೆ. ಈ ಬಗ್ಗೆ ಲಿಖಿತ ರೂಪದಲ್ಲೀ ಆದೇಶ ಪ್ರತಿ ನೀಡಿದ್ದೇವೆ. ಸಾರಿಗೆ ನೌಕರರು ಹಾಗೂ ನಮ್ಮ ನಡುವೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದರು.

Home add -Advt

ನಿನ್ನೆಯೇ ಭರವಸೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಆದೇಶ ಪ್ರತಿ ಸಿದ್ಧಪಡೆಸಿದ್ದೆವು. ಹಾಗಾಗಿ ಸರ್ಕಾರದ ಪ್ರತಿನಿಧಿಯಾಗಿ ನಂದೀಶ್ ರೆಡ್ಡಿ ಮುಖಾಂತರ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರಿಗೆ ಲಿಖಿತ ಪ್ರತಿ ತಲುಪಿಸುವುದಾಗಿ ತಿಳಿಸಿದರು.

ಸಾರಿಗೆ ನೌಕರರು-ಸರ್ಕಾರದ ಸಂಧಾನ ಯಶಸ್ವಿ; ಮುಷ್ಕರ ಅಂತ್ಯ

ಸಾರಿಗೆ ನೌಕರರ ಹೋರಾಟದ ಗೌರವಾಧ್ಯಕ್ಷ ಕೋಡಿಹಳ್ಳಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Related Articles

Back to top button