ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರು ವಜ್ರದ ಕಿವಿಯೋಲೆಯನ್ನು ಕಳೆದುಕೊಂಡಿದ್ದು, ಯಾರಾದರೂ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ತಮ್ಮ ವಜ್ರದ ಕಿವಿಯೋಲೆ ಅಚಾನಕ್ ಆಗಿ ಬಿದ್ದು ಹೋಗಿದೆ. ಹೀಗಾಗಿ ಯಾರಿಗಾದರೂ ವಜ್ರದ ಕಿವಿಯೋಲೆ ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಸುಮಾರು 15 ವರ್ಷಗಳಿಂದ ಪ್ರತಿದಿನ ನಾನು ಈ ವಜ್ರದ ಕಿವಿಯೋಲೆ ಧರಿಸುತ್ತಿದ್ದೆ. ಆದರೆ ಅಚಾನಕ್ ಆಗಿ ಕಳೆದುಕೊಂಡಿದ್ದೇನೆ. ದಯವಿಟ್ಟು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ