Kannada NewsKarnataka News

8 ಕೋಟಿ ರೂ ವೆಚ್ಚದ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲನೆ

ಶೀಘ್ರ ಕಾಮಗಾರಿ ಮುಗಿಸುವಂತೆ ಶಾಸಕ ಗಣೇಶ ಹುಕ್ಕೇರಿ ಸೂಚನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –  ಚಿಕ್ಕೋಡಿ -ಸದಲಗಾ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ  ಹುಕ್ಕೇರಿ  ಸದಲಗಾ ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಪ್ಲೋಮಾ ಕಾಲೇಜ್ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.

ಆದಷ್ಟು ಬೇಗನೆ  ಕಟ್ಟಡವನ್ನು ಪೂರ್ಣಗೊಳಿಸಿ ಎಂದು ಕಟ್ಟಡ ಕಾಮಗಾರಿಯ ನೋಡಲ್ ಅಧಿಕಾರಿಗೆ ಮತ್ತು ಕಾಂಟ್ರಾಕ್ಟರಗೆ  ಸೂಚಿಸಿದರು. ಸದಲಗಾ ಪುರಸಭೆ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Home add -Advt

Related Articles

Back to top button