Kannada NewsKarnataka NewsLatest

*ಮನೆ ಬಳಿ ಆಟವಾಡುತ್ತಾ ನೀರಿನ ಸಂಪ್ ಗೆ ಬಿದ್ದ ಮಗು: ಎರಡೂವರೆ ವರ್ಷದ ಕಂದಮ್ಮ ಸಾವು*

ಪ್ರಗತಿವಾಹಿನಿ ಸುದ್ದಿ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಸ್ವಲ್ಪ ನಿರ್ಲಕ್ಷ ಮಾಡಿದರೂ ಎಂಥಹ ಅನಾಹುತ ತಂದುಕೊಳ್ಳುತ್ತಾರೆ ನೋಡಿ. ಮನೆ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿರುವ ಘೋರ ಗಹ್ಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಿರಾಗ್ ಮೃತ ಮಗು. ಅಣ್ಣಯ್ಯ ಹಾಗೂ ಋತು ದಂಪತಿಯ ಪುತ್ರ.

Home add -Advt

ಚಿರಾಗ್ ತಂದೆ ಅಣ್ಣಯ್ಯ ಕಾರು ತೊಳೆಯಲು ಸಂಪನ್ ಕ್ಯಾಪ್ ತೆರೆದಿಟ್ಟು ಮನೆಯ ಒಳಗೆ ಹೋಗಿದ್ದರು. ಅಲ್ಲಿಯೇ ಆಟವಾಡುತ್ತಿದ್ದ ಮಗು ಚುರಾಗ್ ಸಂಪ್ ಒಳಗೆ ಬಿದ್ದಿದೆ. ತಂದೆ ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಮಗು ಸಂಪ್ ಗೆ ಬಿದ್ದು ಮೃತಪಟ್ಟಿದೆ.

ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button