ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಸೆಳೆತಕ್ಕೆ ಬಸ್ ವೊಂದು ಕೊಚ್ಚಿ ಹೋಗಿರುವ ಘಟನೆ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದಲ್ಲಿ ನಡೆದಿದೆ.
ಸ್ಥಳಕ್ಕೆ ದೌಡಾಯಿಸಿದ ಎನ್ ಡಿ ಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, 9 ಜನರನ್ನು ರಕ್ಷಣೆ ಮಾಡಿದೆ.
ಮಳೆಯ ಆರ್ಭಟಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಉಮರಖೇಡ ಪಟ್ಟಣದ ಬಳಿ ಸೇತುವೆ ಮೇಲಿನಿಂದ ನದಿ ನೀರು ತುಂಬಿ ಹರಿಯುತ್ತಿದೆ. ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಚಾಲಕ ಬಸ್ ಓಡಿಸಲು ಮುಂದಾಗಿದ್ದು, ನೀರಿನ ರಭಸಕ್ಕೆ ಬಸ್ ಸೇತುವೆಯಿಂದ ಉರುಳಿ ಬಿದ್ದಿದೆ.
ಪ್ರಯಾಣಿಕರು ನೀರುಪಾಲಾಗಿದ್ದು, ಸದ್ಯ 9 ಜನರನ್ನು ರಕ್ಷಿಸಲಾಗಿದೆ. ಹಲವರು ಈಜಿ ದಡ ಸೇರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕಬ್ಬಿನ ಗದ್ದೆಯಲ್ಲಿ 2 ವರ್ಷದ ಮಗು ಪತ್ತೆ ಪ್ರಕರಣ; ವಾಮಾಚಾರ ಶಂಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ