Latest

ಮಾವುತನನ್ನೇ ತುಳಿದು ಸಾಯಿಸಿದ ಆನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ಮೃಗಾಲಯದ ಆನೆಯೊಂದು ತನ್ನ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ನಡೆದಿದೆ.

ಹರೀಶ್(38) ತಾವು ಸಲಹುತ್ತಿದ್ದ ಆನೆಯಿಂದ ಹತ್ಯೆಗೀಡಾದವರು. ಆನೆ ತುಳಿತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Home add -Advt

ಮೃತ ಮಾವುತ ಹರೀಶ್ ಅಭಿ ಎಂಬ ಆನೆಯನ್ನು ಆರೈಕೆ ಮಾಡುತ್ತಿದ್ದರು. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇಂದು ಕೆಲಸಕ್ಕೆ ಹಾಜರಾಗಿದ್ದರು. ಈ ಹಿಂದಿನಂತೆಯೇ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ತುಳಿದುಬಿಟ್ಟಿದೆ.

ಇದರಿಂದ ತಬ್ಬಿಬ್ಬಾದ ಇತರೆ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹರೀಶ್​ ಮೈಸೂರಿನ ಲಲಿತಾದ್ರಿಪುರ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ನೌಕರನಾಗಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

 

Related Articles

Back to top button