Latest

ಕೆ.ಕೆ.ಎಕ್ಸ್ ಪ್ರೆಸ್ ರೈಲು ಸ್ಫೋಟ ಬೆದರಿಕೆ; ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೆ.ಕೆ.ಎಕ್ಸ್ ಪ್ರೆಸ್ ರೈಲು ಸ್ಫೋಟ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಓರ್ವ ಆರೋಪಿಯನ್ನು ಕಲಬುರ್ಗಿಯ ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈಲ್ವೆ ಪೊಲೀಸರು ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ದೆಹಲಿ-ಬೆಂಗಳೂರು ಕೆ.ಕೆ.ಎಕ್ಸ್ ಪ್ರೆಸ್ ರೈಲು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Home add -Advt

ಆರೋಪಿ ಸಹೋದರ ಕೆ.ಕೆ.ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಗರೇಟು ಸೇದುತ್ತಿದ್ದ. ಈ ಕಾರಣಕ್ಕಾಗಿ ಆತನಿಗೆ ರೈಲ್ವೆ ಪೊಲೀಸರು ದಂಡ ವಿಧಿಸಿದ್ದರು. ದಂಡ ಕಟ್ಟಲು ಆತನ ಬಳಿ ಹಣವಿಲ್ಲದ ಕಾರಣ ಆತ ತನ್ನ ಅಣ್ಣನಿಗೆ ಕರೆ ಮಾಡಿ ಹಣ ಗೂಗಲ್ ಪೇ ಮಾಡುವಂತೆ ಹೇಳಿದ್ದ. ದಂಡ ಕಟ್ಟಿದ ಬಳಿಕ ಅಣ್ಣನ ಬಳಿ ವಿಷಯ ತಿಳಿಸಿದ್ದ. ಇದರಿಂದ ಕೋಪಗೊಂಡ ಅಣ್ಣ ಕುಡಿದ ಮತ್ತಲ್ಲಿ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ ಕೆ.ಕೆ.ಎಕ್ಸ್ ಪ್ರೆಸ್ ರೈಲು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ.

ಕುಟುಂಬದವರ ವಿರುದ್ಧ ದೂರು ದಾಖಲಿಸಿದ ಹಿರಿಯ ನಟ ಅಶ್ವತ್ಥ ನಾರಾಯಣ

Related Articles

Back to top button