Latest

ನಡುರಸ್ತೆಯಲ್ಲೇ ಅಟ್ಟಾಡಿಸಿ ಹಾಡಹಗಲೇ ಉದ್ಯಮಿಯ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಉದ್ಯಮಿಯೊಬ್ಬರನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ನಡೆದಿದೆ.

ಅಬ್ದುಲ್ ಲತೀಫ್(38) ಹತ್ಯೆಯಾದ ಉದ್ಯಮಿ. ಮೂಡಬಿದ್ರೆಯಲ್ಲಿ ಶುಕ್ರವಾರ ಉದ್ಯಮಿಯಾಗಿರುವ ಅಬ್ದುಲ್ ಲತೀಫ್‍ರನ್ನು ದುಷ್ಕರ್ಮಿಗಳು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಈ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Home add -Advt

ಕಾರು ಮತ್ತು ಬೈಕಿನಲ್ಲಿ ಬಂದ ಸುಮಾರು ಒಂಭತ್ತು ಮಂದಿ ದುಷ್ಕರ್ಮಿಗಳು ಲತೀಫ್ ಮೇಲೆ ದಾಳಿ ನಡೆಸಿದ್ದಾರೆ. ಆಗ ಲತೀಫ್ ತನ್ನ ಪ್ರಾಣ ರಕ್ಷಣೆಗೆ ತಪ್ಪಿಸಿಕೊಂಡು ರಸ್ತೆಯೆಲ್ಲಾ ಓಡಾಡಿದ್ದಾರೆ. ಕೊನೆಗೆ ಲತೀಫ್ ಬ್ಯಾಂಕ್ ಒಳಗೆ ಹೋಗಲು ಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗದಲ್ಲೇ ಲತೀಫ್‍ಗೆ ಒಮ್ಮೆ ಹೊಟ್ಟೆಗೆ ಚ್ಚುಚಿದ್ದಾರೆ. ಇನ್ನೊಬ್ಬ ಹಿಂಬದಿಯಿಂದ ಬೆನ್ನಿಗೆ ಚ್ಚುಚ್ಚಿ ಪರಾರಿಯಾಗಿದ್ದಾರೆ.

ಅಲ್ಲದೇ ಲತೀಫ್ ಮೇಲೆ ದೊಣ್ಣೆಯಿಂದಲೂ ಥಳಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಲತೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಮುಲ್ಕಿ ಪೊಲೀಸರು ಸದ್ಯಕ್ಕೆ ಮಲ್ಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಲ್ಕಿ ನಿವಾಸಿ ಮೊಹಮ್ಮದ್ ಹಾಸಿಮ್, ನಿಸಾರ್, ಮೊಹಮ್ಮದ್ ರಾಝಿಂ, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

Related Articles

Back to top button