Vikalachetanara Day
Cancer Hospital 2
Bottom Add. 3

ಸುವರ್ಣ ವಿಧಾನಸೌಧದ ಮುಂಭಾಗ ಮರಾಠ ಸಮಾಜದ ಬೃಹತ್ ಸಮಾವೇಶಕ್ಕೆ ಸಿದ್ಧತೆ

2A ವರ್ಗ ನೀಡುವಂತೆ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ಮರಾಠ ಸಮಾಜದ ಅಡಿಯಲ್ಲಿ ನಮ್ಮ ಮರಾಠಾ ಸಮುದಾಯದ ಬಹುಕಾಲದ ಬೇಡಿಕೆಯಾಗಿರುವ 2A ವರ್ಗವನ್ನು ನೀಡುವಂತೆ ಬೃಹತ್ ಪ್ರತಿಭಟನೆ ಆಯೋಜಿಸಲಾಗುವುದು, ಪ್ರಸ್ತುತ ನಾವು 3B ವರ್ಗದ ಅಡಿಯಲ್ಲಿ ಬರುತ್ತೇವೆ ಎಂದು ಮರಾಠ ಸಮುದಾಯ ಒತ್ತಾಯಿಸಿದೆ.

ಮರಾಠ ಸಮುದಾಯದವರೆಲ್ಲರೂ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನ ವನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತ್ತು ಈ ಪ್ರತಿಭಟನೆ ಜಾಗೃತಿ ಮತ್ತು ಮಹತ್ವವನ್ನು ತಿಳಿಸುವುದರ ಮೂಲಕ ಮತ್ತು ಮುಂಬರುವ ದಿನಗಳಲ್ಲಿ ಈ ಆಂದೋಲನವನ್ನು ಅದ್ಧೂರಿಯಾಗಿ ನಡೆಸುವ ಉದ್ದೇಶ ಹೊಂದಲಾಗಿದೆ.

ಕರ್ನಾಟಕದಲ್ಲಿ ಮರಾಠಾ ಸಮುದಾಯದ ಜನರು ಸುಮಾರು 60 ರಿಂದ 70 ಲಕ್ಷಗಳಷ್ಟಿರುವುದರಿಂದ ಶಿಕ್ಷಣ, ಉದ್ಯಮಗಳು, ಸ್ಟಾರ್ಟ್‌ಅಪ್‌ಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಗಳ ಅಡಿಯಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಅಭಿವೃದ್ಧಿಯು ಅತ್ಯಂತ ಪ್ರಮುಖ ಅಂಶವಾಗಿದೆ.

ಆದ್ದರಿಂದ ಮರಾಠ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ನಮ್ಮ ಬೇಡಿಕೆ ಈಡೇರಿಕೆಗಾಗಿ 20 ಡಿಸೆಂಬರ್ 2022 ರಂದು ಬೆಳಿಗ್ಗೆ 10 ಗಂಟೆಗೆ ಸುವರ್ಣ ವಿಧಾನಸೌಧ ಬೆಳಗಾವಿ ಮುಂಭಾಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿ.ಎಸ್.ಶ್ಯಾಮಸುಂದರ ಗಾಯಕವಾಡ, ಬಿಜೆಪಿ ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ್, ಬಹು ಸಾಹೇಬ್ ಜಾಧವ್, ವಿನಾಯಕ ಕದಂ, ಮನೋಹರ ಕಡೋಲ್ಕರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು.

ತಪ್ಪು ವ್ಯಕ್ತಿ ಅರೆಸ್ಟ್: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ದಂಡ

https://pragati.taskdun.com/pocso-casewrong-accussed-arresttwo-police-officers5-lakh-finecourt/

Bottom Add3
Bottom Ad 2

You cannot copy content of this page