Latest

ಧರ್ಮದ ಅರ್ಥ ಹುಡುಕಲು ಡಿಕ್ಷ್ನರಿ ಬೇಕಿಲ್ಲ: ಬೆಳಗಾವಿಯಲ್ಲಿ ಚೈತ್ರಾ ಕುಂದಾಪುರ ವಾಕ್ಪ್ರಹಾರ

ಪ್ರಗತಿವಾಹಿನಿ ಸುದ್ದಿ; ನೇಸರಗಿ (ಬೆಳಗಾವಿ): ಹೆಸರಿನ ಅರ್ಥ ಹುಡುಕಲು ಡಿಕ್ಷ್ನರಿ ಬಳಸುತ್ತಾರೆ. ಧರ್ಮದ ಅರ್ಥ ಹುಡುಕಲು ಡಿಕ್ಷ್ನರಿ ಬೇಕಿಲ್ಲ ಎಂದಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಪ್ರತಿ ತಾಯಂದಿರು ಮನೆಗೆ ಒಬ್ಬರಂತೆ ತಮ್ಮ ಪುತ್ರರನ್ನು ಹಿಂದೂ ಕಾರ್ಯಕರ್ತನನ್ನಾಗಿ ಮಾಡಿ ಹಿಂದೂ ಸಮಾಜದ ಬೆಳವಣಿಗೆಗೆ ಸಹಕರಿಸಬೇಕೆಂದು ಕರೆ ನೀಡಿದ್ದಾರೆ.

ಮೇಕಲಮರಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮಾರುತಿ ದೇವರ ಬೃಹತ್ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಹನುಮಾನ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ವಾಯುಪುತ್ರ ಹನುಮ ರಾಮನ ಸೇವಕ. ಅವನು ರಾಮ ಸೀತೆಗಾಗಿ ಮಾಡಿದ ಸೇವೆ, ಸಮುದ್ರಕ್ಕೆ ಸೇತುವೆ ಕಟ್ಟಿದ ಭಜರಂಗಿ ತರಹ ಹಿಂದೂ ಸಮಾಜ ಉನ್ನತಿಗೆ ಶ್ರಮಿಸಬೇಕು. ಹಿಂದೂ ಧರ್ಮಕ್ಕೆ ಆದಿಕಾಲದಿಂದ ವಿಶಿಷ್ಟವಾದ ಸ್ಥಾನವಿದ್ದು, ಮಹಾಭಾರತ ಕಾಲದಲ್ಲಿ ಭೀಮನು ದುಶ್ಯಾಸನನ ಸಂಹಾರಕ್ಕಾಗಿ ಹನುಮನ ವೃತ ನಡೆಸಿ ದ್ರೌಪದಿಯ ತಲೆಗೂದಲಿಗೆ ರಕ್ತ ಪಾಶನ ಮಾಡಿಸಿ ಹನುಮನ ವೃತ ಮಾಡಿದ್ದರು. ಎಲ್ಲ ತಾಯಂದಿರು ನನ್ನ ಗಂಡ ಶ್ರೀ ರಾಮಚಂದ್ರ ನಂತಿರಲಿ‌, ನನ್ನ ಮಗ ಶ್ರೀ ರಾಮಚಂದ್ರನಂತಿರಲಿ ಎಂದು ಅವರ ಏಳಿಗೆಗಾಗಿ ಅನೇಕ ವೃತಗಳನ್ನು ಮಾಡುತ್ತಾರೆ. ಹಾಗೆ ನಮ್ಮ ಹನುಮ ಭಕ್ತ ಮಾಲಾದಾರಿಗಳು ಬರಿಗಾಲಲ್ಲಿ ರಾಮನ ಜಪ ಮಾಡಿ ಭಜರಂಗಿಯ ಜಪ ಮಾಡಿ ತಮ್ಮ ಶ್ರಯೋಭಿವೃದ್ದಿಗೆ ಧರ್ಮ ಜಪಕ್ಕಾಗಿ ಹಿಂದೂತ್ವದ ಸಮಾಜ ಸುಧಾರಣೆಗೆ 42 ದಿನಗಳ ಕಠಿಣ ವೃತ ಮಾಡುವವರು ಲಕ್ಷಾಂತರ ಜನರು ಇದ್ದಾರೆ ಎಂದು ತಿಳಿಸಿದರು.

ಹಿಂದೂ ಧರ್ಮವನ್ನು ನಿಂದಿಸುವ ಜನರು ನಮ್ಮ ಧರ್ಮದ ಆಚಾರ ವಿಚಾರಗಳನ್ನು ಅಧ್ಯಯನ ಮಾಡಿ ಯಾವುದೋ ಡಿಕ್ಷನರಿ ಹೆಸರು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ರಾಮಸೇತುವೆ ಕೆಡವಲು, ರಾಮ ಮಂದಿರ ಕಟ್ಟಡಕ್ಕೆ ಅಡ್ಡಿಪಡಿಸುವ, ನಿಂದಿಸುವ ಆ ನಾಯಕರು ಇಂದು ಮಠ ಮಂದಿರಗಳಿಗೆ ಪ್ರದಕ್ಷಣೆ ಹಾಕುತ್ತಿದ್ದಾರೆ. ಹಿಂದಿನ ಅಮೇರಿಕಾ ಅಧ್ಯಕ್ಷರಾದ ಬರಾಕ್ ಒಬಾಮಾ ಅವರು ಹನುಮನ ಆದರ್ಶ,ನೀತಿಗಳನ್ನು ಕೊಂಡಾಡ್ಡಿದ್ದಾರೆ ಎಂದರು.

ರಾಮ ಎಂದರೆ ರಾ ಎಂದರೆ ರಾಷ್ಟ್ರ ಮ ಎಂದರೆ ಮರ್ಯಾದೆ, ಹಿಂದೂ ಎಂದರೆ ಜಾಗತಿಕ ಧರ್ಮ . ಹಿಂದೂ‌ ಹೆಣ್ಣು ಮಕ್ಕಳು ಇನ್ನು ಮುಂದಾದರೂ ಜಾಗ್ರತರಾಗಬೇಕು. ರಾಮನಂತವರ ಸಹವಾಸ ಮಾಡಬೇಕೆ ಹೊರತು ರಹೀಮನಂತವರ ಸಹವಾಸ ಮಾಡಿಕೊಂಡರೆ ಆ ದುರಾತ್ಮರು ನಮ್ಮ ಹೆಣ್ಣು ಮಗಳನ್ನು ಮದುವೆಯಾಗಿ ಎರಡು ವರ್ಷ ಜೀವನ ಸಾಗಿಸಿ ಮೊನ್ನೆ ದೆಹಲಿಯಲ್ಲಿ 35 ತುಂಡುಗಳಾಗಿ ಕತ್ತರಿಸಿ, ದಿನಕ್ಕೆರಡು ತುಂಡು ಆಯಾ ಜಾಗೆಯಲ್ಲಿ ಹುಗಿದಿಟ್ಟ. ರಹಿಮನಂತವರ ಸಹವಾಸ ಮಾಡಬೇಡಿ ಎಂದು ಹಿಂದು ಹೆಣ್ಣು ಮಕ್ಕಳಲ್ಲಿ ಮನವಿ ಮಾಡಿದರು.

ಚನ್ನಮ್ಮನ ಕಿತ್ತೂರ ಕ್ಷೇತ್ರದ ಶಾಸಕರಾದ ಮಹಾಂತೇಶ ದೊಡಗೌಡರ ಮಾತನಾಡಿ, ನಮ್ಮ ಎಲ್ಲ ಉಪ ಜಾತಿಗಳಿಗೆ ಹಿಂದೂ ಎನ್ನುವ ಪದ ಹೇಗೆ ಮುಖ್ಯವಾಗಿದೆಯೋ ಹಾಗೇ ಹುಟ್ಟಿದ ಧರ್ಮ, ಭಾಷೆಗಳನ್ನು ಗೌರವಿಸುವದು, ನಮ್ಮ ಧರ್ಮವನ್ನು ತಾಯಿಯಷ್ಟೆ ಪ್ರೀತಿಸಬೇಕು.,ಕಲ್ಲಿನಿಂದ ಸಾಗರಕ್ಕೆ ಸೇತುವೆ ಕಟ್ಟಿದ ಹನುಮ, ಇಂದು ಹನುಮನ ಭಕ್ತರಾಗಿ ಹಲವಾರು ಜನ ಹನುಮ ಮಾಲೆ ಧರಿಸಿ ಆದರ್ಶ ವ್ಯಕ್ತಿಯಾಗುತ್ತಿದ್ದಾರೆ . ಮತ್ತು ಹಿಂದೂ ಧರ್ಮದ ಆದರ್ಶವಾಗಿ ಪ್ರಧಾನಿ ನರೇಂದ್ರ ಮೋದಿ ಪರಿಶ್ರಮ ಹಾಗೂ ಹಿಂದೂಗಳ ಸದ್ಬಾವನೆಗಾಗಿ ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರ ನಿರ್ಮಾವಾಗುತ್ತಿದ್ದು ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದ ಪರಿಶ್ರಮದಿಂದ ಇಂದು ಬೃಹತ್ ಆಂಜನಾದ್ರಿ ಬೆಟ್ಟ ನಿರ್ಮಾಣವಾಗಲಿದೆ ಎಂದರು.

ಗದಗದ ಶಿವಾನಂದ ಬ್ರಹನಮಠದ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮ ವಿರೋಧಿಗಳು ಮೊದಲು ಬೆಳಿಗ್ಗೆ ಎದ್ದು ಹೊಸಲು ತೊಳೆದು ಪೂಜೆ ಮಾಡುವ ತಾಯಿಯನ್ನು ನೋಡಿ, ಗಂಡ, ಮಕ್ಕಳ ಏಳ್ಗೆಗಾಗಿ ವೃತ ಮಾಡುವ ತಾಯಂದಿರ ನೋಡಿ, ಕರೋನಾ ಸಮಯದಲ್ಲಿ ಯಾವುದಕ್ಕೂ ಅಂಜದೆ ಪ್ರಾಣ ಕಳೆದುಕೊಂಡ ಜನರ ಅಂತ್ಯಸಂಸ್ಕಾರ ಮಾಡಿದ ಬಜರಂಗ ದಳದ, ದೇಶದ ಸಾವಿರಾರು ಜನರ ಅಂತ್ಯಸಂಸ್ಕಾರ ಮಾಡಿದ ಹುಡುಗರ ನೋಡಲಿ ಮತ್ತು ಹೊಲಕ್ಕೆ ಹೋದ ಗಂಡನಿಗೆ ಮಾತ್ರ ಊಟ ಕಟ್ಟದೆ ಯಾರಾದರೂ ಬಂದರೂ ಅವರು ಊಟ ಮಾಡಲಿ ಎನ್ನುವ ಉದ್ದೇಶದಿಂದ ಹೆಚ್ಚಿಗೆ ಊಟ ಕಟ್ಟಿ ಆದರ್ಶವಾದಿ ತಾಯಿಯರ ಗುಣ ಎಂತಹದು. ಹಿಂದೂ ಧರ್ಮದಲ್ಲಿ ಶವವನ್ನು ಹೂಳಲಿ, ಸುಡಲಿ, ನಾವು ಮಾಡುವ ಪೂಜೆ ಮೃತ ವ್ಯಕ್ತಿಗೆ  ಸಲ್ಲಿಸುವ ವ್ಯಕ್ಕಿತ್ವ ನಮ್ಮದು. ನಮ್ಮ ಹಿಂದೂ ಧರ್ಮ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದರು.

ಬೆಳಗಾವಿ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ, ಎಪಿಎಂಸಿ ಸದಸ್ಯ ಎಫ್ ಎಸ್ ಸಿದ್ದನಗೌಡರ ಮಾತನಾಡಿ , ಮಹಾಮಾರಿ ಕರೋನಾ ಬಂದಾಗ ಎದುರಿಸಿ 134 ಕೋಟಿ ಜನರಿಗೆ ಚಿಕಿತ್ಸೆ ನೀಡಿ ಧೈರ್ಯದಿಂದ ಎದುರಿಸಿದ ಪ್ರಧಾನಿ ಮೋದಿ ಅವರಿಗೆ ಶ್ರೀ ಹನುಮಾನ ಪ್ರೇರಣೆ. ಅದಕ್ಕಾಗಿ ಅವರ ಪ್ರಯತ್ನದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

ನೇಸರಗಿ ಮಲ್ಲಾಪೂರ ಕೆ ಎನ್ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಶ್ರೀ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ ಹಿಂದೂ ಧರ್ಮ, ತಂದೆ, ತಾಯಿಗಳನ್ನು ಪ್ರೀತಿಯಿಂದ ಮರ್ಯಾದೆಯಿಂದ ಗೌರವಿಸೋಣ ಮತ್ತು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯೋಣ ಎಂದರು.

ಕಾರ್ಯಕ್ರಮದಲ್ಲಿ ಹಣಬರಹಟ್ಟಿ ಹಿರೇಮಠದ ಬಸವಲಿಂಗ ಮಹಾಸ್ವಾಮಿಗಳು, ಸದಲಗಾದ ಶ್ರದ್ದಾನಂದ ಮಹಾಸ್ವಾಮಿಗಳು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಎಫ್ ಕೊಳದೂರ, ಗ್ರಾ ಪಂ ಅಧ್ಯಕ್ಷರಾದ ರಾಜು ಹಣ್ಣಿಕೇರಿ, ಭೀಮಸಿ ಹುಲಮನಿ, ಚಂದ್ರಯ್ಯ ಹಿರೇಮಠ, ರೈತ ಸಂಘದ ತಾಲೂಕಾ ಅಧ್ಯಕ್ಷರಾದ ಮಹಾಂತೇಶ ಹಿರೇಮಠ, ಶಿವಪ್ಪ ಚೋಭಾರ, ಪಿಎಸ್ಐ ವಾಯ್ ಎಲ್ ಶೀಗಿಹಳ್ಳಿ, ವಿನೋದ ಯರಡಾಲ, ರಾಜು ಯರಡಾಲ, ಗೌಡಪ್ಪ ಯರಡಾಲ, ಶಿವರಾಯಪ್ಪ್ ಕಮತಗಿ ಸೇರಿದಂತೆ ಮೇಕಲಮರಡಿ ಹಾಗೂ ಅನೇಕ ಗ್ರಾಮಗಳ ಹನುಮ ಮಾಲಾಧಾರಿಗಳು, ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಹೊಸ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

https://pragati.taskdun.com/bjp-janasankalapa-samaveshachikkamagaluruc-t-ravicontroversy-statmentsiddaramaiah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button