
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಜೂ.23 2023 ರಂದು ಬೆಳಿಗ್ಗೆ 9.30 ರಿಂದ ಮದ್ಯಾಹ್ನ 1.30 ಗಂಟೆಯವರೆಗೆ ಖಾಸಗಿ ಕಂಪನಿಗಳಿಂದ ಮಿನಿ ಉದ್ಯೋಗ ಮೇಳವನ್ನು ಬೆಳಗಾವಿ ನಗರದ ಎಸ್.ಎಸ್.ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ರಾಮದೇವ ಹೋಟೆಲ್ ಹಿಂದುಗಡೆ, ನೆಹರು ನಗರದಲ್ಲಿ ಆಯೋಜಿಸಲಾಗಿದೆ.
ವಿದ್ಯಾರ್ಹತೆ:
ಎಸ್.ಎಸ್.ಎಲ್.ಸಿ, ಐಟಿಐ (ಫಿಟ್ಟರ್, ವೆಲ್ಡರ್, ಮನಿಷ್ ಎಲೆಕ್ಟ್ರಿಷಿಯನ್) ಹಾಗೂ ಡಿಪ್ಲೋಮಾ ಮತ್ತು ಯಾವದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ವೆಬ್ ಸೈಟ್ https://formsslchX26THe9Z30687 ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಈ ಮಿನಿ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ 5ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಹೆಚ್ಚಿನ ಮಾಹಿತಿಗಳಿಗಾಗಿ ಮೋ. ಸಂಖ್ಯೆ 8147685479 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ