Belagavi NewsBelgaum NewsElection NewsKannada NewsKarnataka NewsPolitics

ಸಂಜಯ ಪಾಟೀಲ್ ವಿರುದ್ಧ ಹರಿಹಾಯ್ದ ಸಚಿವ ಈಶ್ವರ ಖಂಡ್ರೆ 

ಪ್ರಗತಿವಾಹಿನಿ ಸುದ್ದಿ; ಸಂವಿಧಾನ ಹಾಗೂ ಮಹಿಳೆಯರಿಗೆ ಗೌರವ ಕೊಡೋದು ಬಿಜೆಪಿಗೆ ಗೊತ್ತಿಲ್ಲ. ಸಂಜಯ್ ಪಾಟೀಲ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ.‌ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಅವಮಾನ ಮಾಡಿರುವ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. 

ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಮಾದ್ಯಮಗಳ ಜೊತೆ ಮಾತನಾಡಿ, ಮಹಿಳೆಯರು ಒಂದೇ ಒಂದು‌ ಮತವನ್ನು ಬಿಜೆಪಿಗೆ ನೀಡಬಾರದು. ಬಿಜೆಪಿಗೆ ಮತ ನೀಡಿದರೆ ಅದೂ ನಾರಿಶಕ್ತಿಗೆ ಅವಮಾನ‌ ಮಾಡಿದಂತೆ. ಮಾಜಿ ಶಾಸಕ ಸಂಜಯ ಪಾಟೀಲ್ ಹೇಳಿಕೆ ನೀಡಿದ್ದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.‌

ಗೋವಿಂದ ಕಾರಜೋಳ ಅವರು ಸೋತು ಸುಣ್ಣವಾಗಿದ್ದಾರೆ. ಈಗ‌ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ.‌ ಸೋಲಿನ‌ ಹತಾಶೆಯಿಂದ ಈ ರೀತಿ ಮಾತಾಡುತ್ತಿದ್ದಾರೆ. ಅವರ ಹೇಳಿಕೆಯನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳಲ್ಲ. ಗಾಂಧಿ ಪರಿವಾರದ ಬಗ್ಗೆ ಹಗುರವಾಗಿ ಮಾತಾನಡೋದನ್ನ ಬಿಜೆಪಿ ರೂಢಿ ಮಾಡಿಕೊಂಡಿದೆ ಎಂದು ರಾಹುಲ್ ಗಾಂಧಿ ಕುರಿತ ಗೋವಿಂದ ಕಾರಜೋಳ ಹೇಳಿಕೆಗೆ ಸಚಿವ ಖಂಡ್ರೆ ಕಿಡಿಕಾರಿದ್ದಾರೆ.

Related Articles

Back to top button