Kannada NewsLatest
ಕೆಂಪೇಗೌಡರ ಪ್ರತಿಮೆಗೆ ಕಿತ್ತೂರಿನ ಮಣ್ಣು ಸಂಗ್ರಹ; ಕೆಲವೇ ಕ್ಷಣಗಳಲ್ಲಿ ಬೆಳಗಾವಿಗೆ ಆಗಮಿಸಲಿದ್ದಾರೆ ಸಚಿವತ್ರಯರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಲ್ಲಿ ರಾಜ್ಯದ ನಾನಾ ಕಡೆಯ ಮಣ್ಣು ಸಂಗ್ರಹಿಸಿ ನಿರ್ಮಿಸಲಾಗುತ್ತಿರುವ ಕೆಂಪೇಗೌಡರ ಪ್ರತಿಮೆಗೆ ಕಿತ್ತೂರಿನ ಮಣ್ಣು ಸಂಗ್ರಹಿಸಲು ರಾಜ್ಯ ಸರಕಾರದ ಸಚಿವತ್ರಯರು ಬೆಳಗಾವಿಗೆ ಆಗಮಿಸಲಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಮಧ್ಯಾಹ್ನ 1 ಗಂಟೆಗೆ ಸುವರ್ಣವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
ಅಲ್ಲಿಂದ ಕಿತ್ತೂರಿಗೆ ತೆರಳಿ ಅಲ್ಲಿನ ಐತಿಹಾಸಿಕ ಚನ್ನಮ್ಮನ ಕೋಟೆಯ ಮಣ್ಣು ಸಂಗ್ರಹಿಸಿ ಪುನಃ ಸುವರ್ಣವಿಧಾನಸೌಧಕ್ಕೆ ಆಗಮಿಸಿ ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಡಿಆರ್ ಇಒ ದಿಂದ ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ ಜಿಐಟಿ ಮಾಜಿ ವಿದ್ಯಾರ್ಥಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ