Latest

ಸಂಭಾಜಿ ಮಹಾರಾಜ ಪುತ್ಥಳಿ ಅನಾವರಣಕ್ಕೆ ಉದಯನ್ ರಾಜೇ ಬೋಸ್ಲೆಗೆ ಆಹ್ವಾನ ನೀಡಿದ ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಆನಗೋಳ ಕ್ರಾಸ್ ನಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ಆಗಮಿಸುವಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಸಾತಾರ ಸಂಸದ, ಛತ್ರಪತಿ ಶಿವಾಜಿ ಮಹಾರಾಜರ 17ನೇ ವಂಶಸ್ಥ ಉದಯನ್ ರಾಜೆ ಬೋಸ್ಲೆ ಅವರಿಗೆ ಆಹ್ವಾನ ನೀಡಿದ್ದಾರೆ.

ಶನಿವಾರ ಸಾತಾರಾಕ್ಕೆ ತೆರಳಿದ್ದ ಅಭಯ ಪಾಟೀಲ ಉದಯನ್ ರಾಜೇ ಬೋಸ್ಲೆ ಅವರು ಅರಮನೆಗೆ ಭೇಟಿ ನೀಡಿ ಆಹ್ವಾನ ನೀಡಿ, ಮಾತುಕತೆ ನಡೆಸಿದರು.

Home add -Advt

ಆನಗೋಳ ಕ್ರಾಸ್ ನಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಸ್ಥಾಪಿಸಲಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಉದಯನ್ ರಾಜೇ ಬೋಸ್ಲೆ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದರು.

Related Articles

Back to top button