Latest

ಶಾಸಕ ಬಿ.ಸಿ.ಗೌರಿಶಂಕರ್ ಗೆ ಬಿಗ್ ಶಾಕ್; ಚುನಾವಣೆ ಸ್ಪರ್ಧೆಯಿಂದ 6 ವರ್ಷಗಳ ಕಾಲ ಅನರ್ಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ಅವರನ್ನು ಚುನಾವಣೆಯಿಂದ 6 ವರ್ಷಗಳ ಕಾಲ ಅನರ್ಹಗೊಳಿಸಿ ಕಲಬುರ್ಗಿ ಹೈಕೋರ್ಟ್ ಏಕಸದಸ್ಯಪೀಠ ಆದೇಶ ಹೊರಡಿಸಿದೆ.

ಚುನಾವಣೆ ಅಕ್ರಮ ನಡೆಸಿದ ಕಾರಣಕ್ಕೆ ಶಾಸಕ ಗೌರಿಶಂಕರ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿರುವ ಏಕಸದಸ್ಯಪೀಠದ ನ್ಯಾ. ಸುನೀಲ್ ದತ್ತ್ ಯಾದವ್, ಗೌರಿಶಂಕರ್ ಅವರಿಗೆ 6 ವರ್ಷಗಳ ಕಾಲ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ.

ಬಿ.ಸಿ.ಗೌರಿಶಂಕರ್ ಚುನಾವಣೆ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು.

https://pragati.taskdun.com/vidhanasabha-electioncode-of-conductrestrictionweapons/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button