Kannada NewsKarnataka NewsLatest

*ಕೌಟುಂಬಿಕ ಕಲಹ ವಿವಾದ: ಅವಾಚ್ಯ ಶಬ್ದಗಳಿಂದ ನಿಂದಿಸಿ, ಪತಿ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿದ ಪಿಎಸ್ಐ?*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹ ಬಿಡಿಸಲು ಬಂದ ಪಿಎಸ್ ಐ ಪತಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ಜೆಜೆನಗರ ಪೊಲೀಸ್ ಠಾಣೆಯ ಪಿಎಸ್‌ಐ ಪದ್ಮನಾಭ್ ವಿರುದ್ಧ ಹಲ್ಲೆ, ಅವಾಚ್ಯವಾಗಿ ನಿಂದನೆ ಆರೋಪ ಕೇಳಿಬಂದಿದೆ. ಬರ್ಕತ್ ಪಾಷಾ ಎಂಬುವವರನ್ನು ಪಿಎಸ್‌ಐ ಪದ್ಮನಾಭ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಸುಕುಕಿದ್ದಾಗಿ ಆರೋಪಿಸಿದ್ದಾರೆ.

ಘಟನೆ ಜೆಜೆನಗರ ಠಾಣಾ ವ್ಯಾಪ್ತಿಯ ಪಾದರಾಯನಪುರದಲ್ಲಿ ನಡೆದಿದೆ. ಪತ್ನಿ ಕೆಲಸಕ್ಕೆ ಹೋಗುವ ವಿಚಾರವಾಗಿ ಬರ್ಕತ್ ಪಾಷಾ ಹಾಗೂ ಪತ್ನಿ ನಡುವೆ ಜಗಳವಾಗುತ್ತಿತ್ತು. ಬರ್ಕತ್ ಪತ್ನಿ ಮಿಸ್ಬಾ ಗರ್ಭಿಣಿಯಾಗಿದ್ದರಿಂದ ಸೀಮಂತದ ನಂತರ ಪತ್ನಿ ತವರಿಗೆ ಹೋದಾಗ, ಆಕೆಯನ್ನು ಕರೆತರಲು ಹೋದಾಗ ಗಲಾಟೆ ನಡೆದಿದೆ.

ಇದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ವೇಳೆ ಪಿಎಸ್ ಐ, ಮಹಿಳೆಯ ಪತಿಯ ಕತ್ತು ಹಿಸುಕಿ, ಅವಾಚ್ಯವಾಗಿ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ಘಟನೆ ಪೊಲೀಸ್ ಅಧಿಕಾರಿಯೊಬ್ಬರ ದುರ್ನಡತೆಯ ಕುರಿತು ಪ್ರಶ್ನಿಸುವಂತೆ ಮಾಡಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button