Kannada NewsKarnataka News

*ಬಾವಿಯಲ್ಲಿ ಮುಳಗಿ ಇಬ್ಬರು ಬಾಲಕಿಯರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ತಾಲ್ಲೂಕಿನ ಜಿನ್ನಾಪುರ ತಾಂಡಾದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿದ್ದ ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ನಡೆದಿದೆ.

Home add -Advt

ಮೇ.30 ಮಧ್ಯಾಹ್ನ 3.30ರ ಸುಮಾರಿಗೆ  ಈ ಘಟನೆ ನಡೆದಿದೆ.‌ ಚಿನ್ನಾಪುರ ತಾಂಡಾದ ಹೊರವಲಯದ ಹೊಲದಲ್ಲಿಯೇ ಇವರ ಕುಟುಂಬದವರು ಮನೆ ಹೊಂದಿದ್ದರು. ತಮ್ಮದೇ ತೋಟದ ಮನೆ ಬಳಿಯಿದ್ದ ಬಾವಿ ಬಳಿ ಆಟವಾಡಲು ಹೋಗಿದ್ದಾಗ ಇಬ್ಬರು ಬಾಲಕಿಯರು ಕಾಲು ಜಾರಿ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. 

ಸೌಂದರ್ಯ ರತ್ನಪ್ಪ ಪೂಜಾರ (11) ಹಾಗೂ ಲಕ್ಷ್ಮಿ ಶರಣಪ್ಪ ಪೂಜಾರ (10) ಮೃತ ರ್ದುದೈವಿಗಳು. ಈಜು ಬಾರದ ಮಕ್ಕಳು ನೀರಿನಲ್ಲಿ ಬಿದ್ದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button