ಪ್ರಗತಿವಾಹಿನಿ ಸುದ್ದಿ; ಮುಂಬೈ: ವೈವಾಹಿಕ ಸಂಬಂಧದಲ್ಲಿ ಬಲವಂತದ ಲೈಂಗಿಕ ಕ್ರಿಯೆ ಕಾನೂನು ಬಾಹಿರ ಎಂದು ಪರುಗಣಿಸಲಾಗದು ಎಂದು ಮುಂಬೈ ಹೆಚ್ಚುವರಿ ಸೆಷನ್ ನ್ಯಾಯಾಲಯ ತೀರ್ಪು ನೀಡಿದೆ.
ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿದ್ದು, ಇದರಿಂದ ತನಗೆ ಸೊಂಟದ ಕೆಳಗೆ ಪಾರ್ಶ್ವವವಾಯು ಉಂಟಾಗಿದೆ ಎಂದು ದೂರಿದ್ದಳು. ಕಳೆದ ವರ್ಷ ನವೆಂಬರ್ 22ರಂದು ವಿವಾಹವಾಗಿದ್ದ ಮಹಿಳೆಗೆ ಆರಂಭದಲ್ಲಿ ಪತಿ ಹಾಗೂ ಆಕೆ ಮನೆಯವರು ಹಣಕ್ಕಾಗಿ ಪೀಡಿಸಿದ್ದಲ್ಲದೇ, ಪತಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದ. ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಳು.
ಇದೀಗ ಕೋರ್ಟ್ ವಿವಾಹಿತರಲ್ಲಿ ಬಲವಂತದ ಲೈಂಗಿಕ ಕ್ರಿಯೆ ಕಾನೂನು ಬಾಹಿರವಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಚಿಹ್ನೆ ಮೇಲೆ ಚುನಾವಣೆ ಫಿಕ್ಸ್: ಕಾಂಗ್ರೆಸ್, ಬಿಜೆಪಿ ಉಸ್ತುವಾರಿಗಳ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ