Kannada NewsKarnataka NewsLatest

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಬಿಲ್ಡರ್ ಮರ್ಡರ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಇಲ್ಲಿಯ ಗುರುಪ್ರಸಾದ ಕಾಲೋನಿಯಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬರನ್ನು ಮರ್ಡರ್ ಮಾಡಲಾಗಿದೆ.

ಗುರುಪ್ರಸಾದ ಕಾಲೋನಿಯ (ಭವಾನಿ ನಗರ) ಗಣಪತಿ ಮಂದಿರದ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಮರ್ಡರ್ ಆದವರು ಬಿಲ್ಡರ್ ಆಗಿರುವ ರಾಜು ಮಲ್ಲಪ್ಪ ದೊಡ್ಡಬಣ್ಣವರ್ (46) ಎಂದು ಗುರುತಿಸಲಾಗಿದೆ.

ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪತ್ನಿಯನ್ನು ನೋಡಲು ಬೆಳಗ್ಗೆ 6 ಗಂಟೆಗೆ ಕಾರಿನಲ್ಲಿ ಹೋಗುತ್ತಿರುವಾಗ ಮನೆಯಿಂದ ಸ್ವಲ್ಪ ದೂರದಲ್ಲೇ  ಅವರನ್ನು ಮಚ್ಚಿನಿಂದ ಕೊಚ್ಚಿ ಹಾಕಲಾಗಿದೆ.

ರಾಜು ಮೂಲತಃ ಬಸ್ತವಾಡದವರು. ಭವಾನಿ ನಗರದಲ್ಲಿ ವಾಸವಾಗಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

 

ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : ಶಾಲೆಯ ಎದುರೇ ರಸ್ತೆ ಅಪಘಾತಕ್ಕೆ ಬಾಲಕ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button