Latest

ಪತ್ನಿಯ ಅಂತ್ಯಕ್ರಿಯೆ ನಡೆಸಿ ವಾಪಸ್ ಬರುವುದರೊಳಗೆ ಮನೆ ಕಳುವು ಮಾಡಿದ ದುರುಳರು

ಪ್ರಗತಿವಾಹಿನಿ ಸುದ್ದಿ; ಶಿರಸಿ: ಶಿರಸಿಯ ಆರೇಕೊಪ್ಪದಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಅಂತ್ಯಕ್ರಿಯೆ ನಡೆಸಿ ವಾಪಸ್ ಮನೆಗೆ ಬರುವಷ್ಟರಲ್ಲಿ ಕಳ್ಳರು ಮನೆಯಲ್ಲಿದ್ದ ಹಣ , ಒಡವೆ ದೋಚಿದ್ದಾರೆ.

ಆರೆಕೊಪ್ಪದ ಅಬ್ದುಲ್ ಬಶೀರ್ ಎಂಬುವವರ ಮನೆಯಲ್ಲಿ ಕಳುವಾಗಿದೆ. ಅಬ್ದುಲ್ ಬಶೀರ್ ತೀವ್ರ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಪತ್ನಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿಯ ಮೃತದೇಹವನ್ನು ಇನ್ನೊಂದು ಮನೆಗೆ ತಂದು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸಿದ್ದಾರೆ. ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ತಮ್ಮ ಮಗನೊಡನೆ ಆರೆಕೊಪ್ಪದ ಮನೆಗೆ ಮರಳಿದ್ದಾರೆ.

Home add -Advt

ಇತ್ತ ಕಳ್ಳರು ಅಬ್ದುಲ್ ಬಶೀರ್ ಅವರ ಮನೆ ಹೆಂಚು ತೆಗೆದು ಒಳಗಿಳಿದು, ಕಪಾಟಿನ ಬಾಗಿಲು ಮುರಿದು ಅದರಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳನ್ನು ಕದ್ದಿದ್ದಾರೆ. ಮನೆಗೆ ಬಂದಾಗ ಅಬ್ದುಲ್ ಅವರಿಗೆ ಕಳುವಾದ ವಿಷಯ ಗೊತ್ತಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ.

ಹುಕ್ಕೇರಿ ಮನೆ ಕಳ್ಳತನ ಆರೋಪಿ ಅಪ್ರಾಪ್ತ ಬಾಲಕ

https://pragati.taskdun.com/latest/hukkeri-house-theft-caseaccused-is-minorpolice-appropriate-action/

Related Articles

Back to top button