
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಗಸ್ಟ್ 14ರವರೆಗೆ ನಮ್ಮ ಮೆಟ್ರೋ ಸಂಚಾರದಲ್ಲಿ ಕೆಲವೆಡೆ ವ್ಯತ್ಯವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಇಂದಿನಿಂದ ಆಗಸ್ಟ್ 14ರವರೆಗೆ ನಾಲ್ಕು ದಿನಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯವಾಗಲಿದೆ. ಬೈಯ್ಯಪ್ಪನಹಳ್ಳಿ ಟರ್ಮಿನಲ್ ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ, ಕೃಷ್ಣರಾಜಪುರ, ವೈಟ್ ಫೀಲ್ಡ್ ವರೆಗೆ ಮೆಟ್ರೋ ಸಂಚಾರ ಮಾರ್ಗದಲ್ಲಿ ಸಿಗ್ನಲ್, ಟರ್ಮಿನಲ್ ಸೇರಿದಂತೆ ಕಾಮಗರಿಗಳು ನಡೆಯುತ್ತಿರುವ ಕಾರಣಕ್ಕೆ ಮೆಟ್ರೋ ಸಂಚಾರ ಕೆಲ ಕಾಲ ಸ್ಥಗಿತಗೊಳ್ಳಲಿದೆ.
ಬೈಯ್ಯಪ್ಪನಹಳ್ಳಿಯವರೆಗೆ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸುತ್ತವೆ. ಆದರೆ ವೈಯ್ಯಪ್ಪನ ಹಳ್ಳಿಯಿಂದ ಮುಂದೆ ವೈಟ್ ಫೀಲ್ಡ್ ವರೆಗೆ ಸಂಚಾರ ವ್ಯತ್ಯವಾಗಲಿದೆ. ಮುಂಜಾನೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.
ಅದೇ ರೀತಿ ಕೆಂಗೇರಿ ನಿಲ್ದಾಣದಿಂದ ಚೆಲ್ಲಘಟ್ಟ ನಿಲ್ದಾಣದವರೆಗೆ ಆಗಸ್ಟ್ 14ರಂದು ಬೆಳಿಗ್ಗೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ