ಪ್ರಗತಿವಾಹಿನಿ ಸುದ್ದಿ; ಗಾಜಿಪುರ: 21 ದಿನದ ನವಜಾತ ಶಿಶುವನ್ನು ಪೆಟ್ಟಿಗಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ.
ನವಜಾತ ಹೆಣ್ಣುಮಗವನ್ನು ಮರದ ಪೆಟ್ಟಿಗೆಯಲ್ಲಿಟ್ಟು ಅದರ ಜೊತೆ ಜಾತಕ, ದುರ್ಗಾದೇವಿ ಹಾಗೂ ವಿಷ್ಣು ಫೋಟೋವನ್ನಿಟ್ಟು ಗಂಗಾನದಿಯಲ್ಲಿ ತೇಲಿ ಬಿಡಲಾಗಿದ್ದು, ದಾದ್ರಿಘಾಟ್ ಬಳಿ ಮಗು ದಡಕ್ಕೆ ಬಂದಿದೆ. ಮಗುವಿನ ಅಳುವಿನ ಶಬ್ಧ ಕೇಳಿ ಸ್ಥಳೀಯ ವ್ಯಕ್ತಿ ಗುಲ್ಲು ಎಂಬುವವರು ಪೆಟ್ಟಿಗೆ ತೆರೆದು ನೋಡಿದಾಗ ಮಗು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮಗುವನ್ನು ಮನೆಗೆ ಕರೆದೊಯ್ದು ಆರೈಕೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಮಗುವನ್ನು ನೀಡುವಂತೆ ದಾದ್ರಿಘಾಟ್ ಬಳಿಯ ಗುಲ್ಲು ಮನೆಗೆ ಬಂದು ಯುವಕ-ಯುವತಿ ಇಬ್ಬರು ಗಲಾಟೆ ಮಾಡಿದ್ದಾರೆ. ಇದಕ್ಕೆ ಗುಲ್ಲು ನಿರಾಕರಿಸಿದ್ದು ಯುವಕ-ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗುವನ್ನು ತಾವೇ ಪೋಷಿಸುವುದಾಗಿಯೂ ಅರ್ಜಿ ಸಲ್ಲಿಸಿದ್ದು, ವಾರದಲ್ಲಿ ಪ್ರಕರಣ ಇತ್ಯರ್ಥವಾಗಲಿದೆ ಎಂದು ತಿಳಿದುಬಂದಿದೆ.
ಬಿಎಸ್ ವೈ ಸರ್ಕಾರದ ಕಾರ್ಯವೈಖರಿಗೆ ಅರುಣ್ ಸಿಂಗ್ ಮೆಚ್ಚುಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ