Latest

ವಿಶೇಷ ಪ್ಯಾಕೇಜ್ ನ 3ನೇ ಹಂತದ ಹಂಚಿಕೆ ಮಾಡಿದ ವಿತ್ತ ಸಚಿವೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್ ಡೌನ್ ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನತೆಯ ಅನುಕೂಲಕ್ಕಾಗಿ ಈಗಾಗಲೇ ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದು, ಈ ಪ್ಯಾಕೇಜ್ ನ ಮೂರನೇ ಹಂತದ ಹಂಚಿಕೆ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ, ವಿಶೇಷ ಪ್ಯಾಕೇಜ್ ನ ಮೂರನೇ ಹಂತದಲ್ಲಿ ಕೃಷಿ, ಕೃಷಿಯಾಧಾರಿತ ಹೈನುಗಾರಿಕೆ, ಮೀನುಗಾರಿಕೆಗೆ ಸಂಬಂಧಿಸಿದಂತೆ ಆದ್ಯತೆ ನೀಡಲಾಗಿದೆ ಎಂದರು. ಭಾರತದ ಜನಸಂಖ್ಯೆಯ ಬಹುತೇಕ ಜನ ಕೃಷಿಯನ್ನು ಅವಲಂಭಿಸಿದ್ದಾರೆ. ಏನೇ ಕಷ್ಟಗಳಿದ್ದರೂ ಕೃಷಿ ಚಟುವಟಿಕೆಯನ್ನು ನಡೆಸುತ್ತಾರೆ. ಈಗಾಗಲೇ ಹಿಂಗಾರು ಬೆಳೆ ಕಟಾವು ಮುಗಿದಿದೆ. ಕೃಷಿಗೆ ಸಂಬಂಧಿಸಿದಂತೆ 11 ಘೋಷಣೆ ಮಾಡುತ್ತಿದ್ದು, ಅವುಗಳಲ್ಲಿ 8 ಮೂಲಸೌಕರ್ಯ ಹಾಗೂ ಸಾಮರ್ಥ್ಯ ಬಲಪಡಿಸುವುದಕ್ಕೆ ಸಂಬಂಧಿಸಿದ್ದಾಗಿವೆ ಎಂದರು.

ಪ್ರಮುಖಾಂಶ:

* ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18,700ಕೋಟಿ ಹಣ ಮಾರ್ಚ್, ಏಪ್ರಿಲ್ ನಲ್ಲಿ ಸಂದಾಯವಾಗಿದೆ
* ಕನಿಷ್ಠ ಬೆಂಬಲಬೆಲೆಯಲ್ಲಿ 73,400 ಕೋಟಿ ಖರೀದಿ
* ಕೃಷಿ ಮೂಲಸೌಕರ್ಯ ಅಭಿವೃದ್ಧಿಗಾಗಿ 1ಲಕ್ಷ ಕೋಟಿ
* ಡೈರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15 ಸಾವಿರ ಕೋಟಿ ರೂ
* ಕೃಷಿ ಉತ್ಪನ್ನ ಸಾಗಾಟಕ್ಕೆ 10 ಸಾವಿರ ಕೋಟಿ ರೂ.
* ಕರ್ನಾಟಕದ ರಾಗಿ ಬೆಳೆಗೆ ಗ್ಲೋಬಲ್ ಬ್ರ್ಯಾಂಡ್
* ಸಾವಯವ ಕೃಷಿ ಬೆಳೆಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ
* ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ರೂ
* ಆಹಾರ ಉದ್ಯಮಕ್ಕೆ 10 ಸಾವಿರ ಕೋಟಿ’
* ಜಾನುವಾರು ರೋಗ ನಿಯಂತ್ರಣಕ್ಕೆ 13,343 ಕೋಟಿ
* ಎಲ್ಲಾ ಪಶುಗಳಿಗೆ ಶೇ.100ರಷ್ಟು ರೋಗನಿರೋಧಕ ಲಸಿಕೆ- 53 ಕೋಟಿ ಪಶುಗಳಿಗೆ ಲಸಿಕೆ
* ಹೊಸ ಬೋಟ್ ಖರೀದಿಗೆ ಮೀನುಗಾರರಿಗೆ ಸಾಲಸೌಲಭ್ಯ
* ಔಷದೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ
* ಗಿಡಮೂಲಿಕೆ ಉಳಿಮೆ ಮಾಡಲು ನೆರವು-ಇದರಿಂದ 5 ಸಾವಿರ ಕೋಟಿ ಆದಾಯ ನಿರೀಕ್ಷೆ
* ಜೇನು ಸಾಕಾಣಿಕೆಗೆ 500 ಕೋಟಿ ಮೀಸಲು
* ಜೇನು ಮೇಣ ರಫ್ತಿಗೆ ಕಡಿವಾಣಕ್ಕೆ ಯತ್ನ-ಇದರಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಾಧ್ಯ
* ಟೊಮ್ಯಾಟೋ, ಈರುಳ್ಳಿ,ಆಲೂಗಡ್ಡೆ ಬೆಳೆ ಸಾಗಾಣೆ, ಸಂಸ್ಕರಣೆಗೆ 500 ಕೋಟಿ ರೂ.
* ಇದೇ ಉತ್ಪನ್ನಗಳ ಸಾಗಾಟಕ್ಕೆ ಶೇ.50ರಷ್ಟು ಸಬ್ಸಿಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button