Latest

*ವಾಟರ್ ಟ್ಯಾಂಕರ್ ಹರಿದು 4 ವರ್ಷದ ಬಾಲಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕುಡುಕ ಚಾಲಕನ ಅವಾಂತರಕ್ಕೆ 4 ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರಿನ ಆನೇಕಲ್ ನಲ್ಲಿ ನಡೆದಿದೆ.

ಐಸ್ ಕ್ರೀಮ್ ಅಂಗಡಿಯಿಂದ ಅಣ್ಣನ ಜೊತೆ ಬರುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ನೀರಿನ ಟ್ಯಾಂಕರ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 4 ವರ್ಷದ ಭುವನ್ ಮೃತ ಬಾಲಕ.

Home add -Advt

ಆನೇಕಲ್ ನ ಸಿ.ಕೆ.ಪಾಳ್ಯದಲ್ಲಿ ಈ ದುರಂತ ಸಂಭವಿಸಿದೆ. ಐಸ್ ಕ್ರೀಂ ಅಂಗಡಿಯಿಂದ ವಾಪಸ್ ಆಗುತ್ತಿದ್ದ ಬಾಲಕ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ಬಾಲಕನಿಗೆ ಗುದ್ದಿ, ಕೆಳಗೆ ಬಿದ್ದಿದ್ದ ಬಾಲಕನ ತಲೆಯ ಮೇಲೆಯೇ ಟ್ಯಾಂಕರ್ ಚಲಾಯಿಸಿಕೊಂಡು ಚಾಲಕ ತೆರಳಿದ್ದಾನೆ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಭನ್ನೇರುಘಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

https://pragati.taskdun.com/d-k-shivakumarclarificationguarantee-scheme/

Related Articles

Back to top button