
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಗೆ ಲಭಿಸಿದ್ದು, ಸ್ಪೀಕರ್ ಪ್ರತಾಪಚಂದ್ರ ಶೆಟ್ಟಿ ಅವಿಶ್ವಾಸಕ್ಕೆ ಸೂಕ್ತ ದಿನಾಂಕ ನಿಗದಿ ಮಾಡುವುದಾಗಿ ಘೋಷಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸಭಾಪತಿಗಳ ವಿರುದ್ಧ ಆಯನೂರು ಮಂಜುನಾಥ್ ಅವರು ಪ್ರಸ್ತಾಪ ಮಾಡಿದ್ದ ಅವಿಶ್ವಾಸ ನಿರ್ಣಯದ ಪರ ಬಿಜೆಪಿಯ 10 ಸದಸ್ಯರು ಎದ್ದು ನಿಂತು ಸಮ್ಮತಿ ಸೂಚಿಸಿದರು. ನಿರ್ಣಯಕ್ಕೆ ಅನುಮತಿ ನೀಡಲಾಗಿದೆ.
ಈ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್, ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂದಿಸಿದ್ದು, ಅಂಗೀಕಾರವಾಗಿದೆ. ಇನ್ನೆರಡು ದಿನಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ. ಸಭಾಪತಿಗಳ ಎದುರು ಆಯ್ಕೆಗಳಿದ್ದು ಅವರಾಗಿಯೇ ರಾಜೀನಾಮೆ ನೀಡಬೇಕು ಅಥವಾ ಸದನದಲ್ಲಿ ಅವಿಶ್ವಾಸ ಮಂಡನೆ ಎದುರಿಸಬೇಕು. ಯಾರು ಸಭಾಪತಿಯಾಗಬೇಕು ಎಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ ಎಂದರು.