Latest

ರಾಜ್ಯದಲ್ಲಿ ಮತ್ತೆ 5 ಜನರಲ್ಲಿ ಒಮಿಕ್ರಾನ್ ಪತ್ತೆ: ಬೆಳಗಾವಿಯಲ್ಲೂ ಓರ್ವರಿಗೆ ಒಮಿಕ್ರಾನ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:  ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೊನಾ ವೈರಸ್ ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿದ್ದು, ಇಂದು ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ಬೆಳಗಾವಿಯಲ್ಲೂ ಓರ್ವರಿಗೆ ಒಮಿಕ್ರಾನ್ ಪತ್ತೆಯಾಗಿದೆ.

ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಮತ್ತೆ 5 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ನಿಂದ ಬಂದ 19 ವರ್ಷದ ಯುವಕ, ದೆಹಲಿಯಿಂದ ಆಗಮಿಸಿದ 36 ವರ್ಷದ ಪುರುಷ ಮತ್ತು 70 ವರ್ಷದ ಮಹಿಳೆ, ಆಫ್ರಿಕಾದಿಂದ ಹಾಗೂ ನೈಜಿರಿಯಾದಿಂದ ಬಂದ ಇಬ್ಬರಲ್ಲಿ ಸೋಂಕು ದೃಢವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ನೈಜೀರಿಯಾದಿಂದ ಬಂದ 53 ವರ್ಷದ ವ್ಯಕ್ತಿಯೋರ್ವರಿಗೆ  ಒಮಿಕ್ರಾನ್ ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಸಿಗಬೇಕಿದೆ.

ಕೋವಿಡ್ ಖಚಿತವಾಗಿದೆ. ಆದರೆ ಓಮಿಕ್ರಾನ್ ಎನ್ನುವುದು ಇನ್ನೂ ಖಚಿತವಾಗಿಲ್ಲ. ಪರೀಕ್ಷೆಗೆ ಕಳಿಸಲಾಗಿದೆ ಎಂದು ಡಿಎಚ್ಓ ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.

ನೈಜೀರಿಯಾದಿಂದ ರಾಜ್ಯಕ್ಕೆ ಬಂದ ಓರ್ವರಿಗೆ ಒಮಿಕ್ರಾನ್ ಖಚಿತವಾಗಿದೆ ಎಂದು ಸಚಿವ ಡಿ.ಸುಧಾಕರ್ ಟ್ವೀಟ್ ಮಾಡಿರುವುದು ಬೆಳಗಾವಿಯದ್ದೇ ಇರಬಹುದೆನ್ನುವ ಅನುಮಾನ ಮೂಡಿದೆ.

ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರಿಂದ ಪಾರದರ್ಶಕ ನಡೆ: ಸಚಿವ ಅರಗ ಜ್ಞಾನೇಂದ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button