ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಮೈತ್ರಿ ಪಕ್ಷಗಳಿಗೆ ಒಂದು ವಾರ ಅವಕಾಶ ಸಿಕ್ಕಿದೆ.
ಮುಂದಿನ ಸೋಮವಾರದವರೆಗೂ ಎಲ್ಲ ರೀತಿಯ ಪ್ರಯತ್ನ ಮಾಡಬಹುದು. ಏಕೆಂದರೆ ಸ್ಪೀಕರ್ ತಮ್ಮ ನಿರ್ಧಾರ ಪ್ರಕಟಿಸಲು ಇನ್ನೂ ಒಂದು ವಾರ ಬೇಕು ಎನ್ನುವ ಸುಳಿವು ನೀಡಿದ್ದಾರೆ.
ಈಗ ಸಲ್ಲಿಕೆಯಾಗಿರುವ 14 ನಾಮಪತ್ರಗಳ ಪೈಕಿ ಕೇವಲ 5 ಕ್ರಮಬದ್ಧವಾಗಿವೆ. 8 ಸರಿಯಾಗಿಲ್ಲ. ಮತ್ತೊಂದನ್ನು ಇನ್ನೂ ಪರಿಶೀಲಿಸಿಲ್ಲ ಎಂದು ರಮೇಶಕುಮಾರ ತಿಳಿಸಿದ್ದಾರೆ.
ಕ್ರಮಬದ್ಧವಾಗಿ ಸಲ್ಲಿಸದವರಿಗೆ ನಾಮಪತ್ರ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗುತ್ತದೆ. ಕ್ರಮಬದ್ದವಾಗಿರುವವರು ಇದೇ 12ರಂದು ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗಬೇಕು.
ಎಲ್ಲರ ನಾಮಪತ್ರ ಕ್ರಮಬದ್ಧವಾಗಿ, ಅವರನ್ನೆಲ್ಲ ವಿಚಾರಣೆ ನಡೆಸಿದ ನಂತರ ಸ್ಪೀಕರ್ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಹಾಗಾಗಿ ಇನ್ನೂ ಒಂದು ವಾರ ಈ ಎಲ್ಲ ವಿದ್ಯಾಮಾನಗಳು ನಡೆಯಲಿವೆ.
ಅಲ್ಲಿಯವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಶಾಸಕರ ಮನವೊಲಿಸುವ ಕಸರತ್ತು ಮುಂದುವರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ