Kannada NewsKarnataka NewsLatest
*ಅಳುತ್ತಿದ್ದ ಮಗುವನ್ನು ಎತ್ತಿ ಗೋಡೆಗೆ ಎಸೆದು ಕೊಂದ ತಂದೆ*
ಪ್ರಗತಿವಾಹಿನಿ ಸುದ್ದಿ: ಒಂದು ವರ್ಷದ ಮಗುವನ್ನು ಎತ್ತಿ ಗೋಡೆಗೆ ಎಸೆದು ತಂದೆಯೇ ಹತ್ಯೆಗೈದಿರುವ ಘೋರ ಘಟನೆ ಧಾರವಾಡದಲ್ಲಿ ನಡೆದಿದೆ.
ಮಗು ತನ್ನ ನಿದ್ದೆ ಹಾಳು ಮಾಡಿದೆ ಎಂದು ಕೋಪಗೊಂಡ ತಂದೆ ಮಗುವನ್ನು ಎತ್ತಿ ಗೋಡೆಗೆ ಅಪ್ಪಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಂದಮ್ಮನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.
ಒಂದು ವರ್ಷದ ಶ್ರೇಯಾ ಮೃತ ಮಗು. ಶಂಭುಲಿಂಗಯ್ಯ ಶಾಪುರಮಠ ಮಗುವನ್ನೆ ಕೊಂದ ತಂದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ಬಂಧಿಸಲಾಗಿದೆ.




