Latest

ಶೀಘ್ರದಲ್ಲೇ ಆನ್ ಲೈನ್ ನಲ್ಲಿ ದೇವರ ದರ್ಶನಕ್ಕೆ ಅವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಸಧ್ಯಕ್ಕೆ ದೇವಾಲಯದ ಬಾಗಿಲು ತೆರೆಯಲು ಅವಕಾಶವಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ನಿಂದಾಗಿ ದೇವಾಲಯಗಳ ಬಾಗಿಲು ಮುಚ್ಚಿದ್ದು, ಇದರಿಂದಾಗಿ ಅರ್ಚಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇವಾಲಯದ ಬಾಗಿಲು ತೆರೆಯಲು ಅವಕಾಶ ನೀಡುವಂತೆ ಅರ್ಚರಕು ಒತ್ತಾಯಿಸುತ್ತಿದ್ದಾರೆ. ಆದರೆ ದೇವಾಲಯಗಳ ಬಾಗಿಲು ತೆರೆದರೆ ಭಕ್ತರ ಗುಂಪು ಸೇರಬಹುದು.ಇದರಿಂದ ಇನ್ನಷ್ಟು ಸೋಂಕು ಹರಡುವ ಸಾಧ್ಯತೆಯಿದೆ. ಹಾಗಾಗಿ ಸಧ್ಯಕ್ಕೆ ದೇವಾಲಯಗಳು ತೆರೆಯಲ್ಲ ಎಂದರು.

Home add -Advt

ಆದರೆ ಆನ್ ಲೈನ್ ನಲ್ಲಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಮೇ 26ರಿಂದ ಆನ್ ಲೈನ್ ಸೇವೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಒಂದು ವೆಬ್ ಸೈಟ್ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ದೇವರ ಸೇವೆ, ಪೂಜೆ ಸೇರಿದಂತೆ ಲೈವ್ ದರ್ಶನ ವ್ಯವಸ್ಥೆ ಮಾಡಲಾಗುವುದು, ರಥೋತ್ಸವದಂತಹ ಕಾರ್ಯಕ್ರಮ , ಹೆಚ್ಚು ಜನ ಸೇರುವ ಕಾರ್ಯಕ್ರಮ ಹೊರತುಪಡಿಸಿ ಎಲ್ಲಾ ರೀತಿಯ ಕಾರ್ಯಕ್ರಮ ತೋರಿಸಲಾಗುವುದು ಎಂದು ಹೇಳಿದರು.

 

Related Articles

Back to top button