ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರಾಜ್ಯದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಬಹ್ರೇನ್ ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನವಾಗಿದ್ದು, ನೌಕಾಪಡೆಯ ಹಡಗಿನಲ್ಲಿ ಮಂಗಳೂರು ಬಂದರಿಗೆ ಬಂದು ತಲುಪಿದೆ.
2 ಕ್ರಯೋಜನಿಕ್ ಐಸೋಕಂಟೇನರ್ ಗಳಲ್ಲಿ ಆಕ್ಸಿಜನ್ ಹೊತ್ತು ತಂದ ಐಎನ್ ಎಸ್ ತಲ್ವಾರ್ ಹೆಸರಿನ ಹಡಗು ನವಮಂಗಳೂರು ಬಂದರು ತಲುಪಿದ್ದು, ಜಿಲ್ಲಾಡಳಿತದಿಂದ ಆಕ್ಸಿಜನ್ ಸಂಗ್ರಹಿಸಲಾಗುತ್ತಿದೆ.
ಬಹ್ರೈನ್ ನಿಂದ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್ ನಲ್ಲಿ 20 ಮೆಟ್ರಿಕ್ ಟನ್ ಆಕ್ಸಿಜನ್ ಕರಾವಳಿ ಜಿಲ್ಲೆಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಉಳಿದ 20 ಮೆಟ್ರಿಕ್ ಟನ್ ರಾಜ್ಯದ ಉಳಿದ ಜಿಲ್ಲೆಗಳ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ.
ಶಾಲೆಗಳ ಬೇಸಿಗೆ ರಜೆ ಅವಧಿ ಪರಿಷ್ಕರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ