ಪ್ರಗತಿವಾಹಿನಿ ಸುದ್ದಿ; ಲೇಹ್: ಅತೀ ಎತ್ತರ ಪ್ರದೇಶದಲ್ಲೂ ದೇಶದ ಹಿತ ಕಾಪಾಡುತ್ತಿದ್ದೀರಿ. ಯೋಧರ ತ್ಯಾಗ, ಶೌರ್ಯ ಬೆಲೆಕಟ್ಟಲಾಗದ್ದು. ಯೋಧರ ಇಚ್ಛಾಶಕ್ತಿ ಪರ್ವತಗಳಿಗಿಂತಲೂ ದೊಡ್ಡದು ಎಂದು ಲೇಹ್ ನಲ್ಲಿ ಸೈನಿಕರಿಗೆ ಪ್ರಧಾನಿ ಮೋದಿ ಧೈರ್ಯ ತುಂಬಿದ್ದಾರೆ.
ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಶಾಂತಿ ಎನ್ನುವುದು ಬಲಹೀನತೆ ಅಲ್ಲ. ಭಾರತೀಯ ಸೇನೆಗೆ ನಾವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ವೇಗವಾಗಿ ಸೇನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಶಾಂತಿ ಹಾಳು ಮಾಡುವ ಪ್ರಯತ್ನವನ್ನು ಯಾರೇ ಮಾಡಿದರೂ ಸೂಕ್ತ ಉತ್ತರ ನೀಡಲು ಸಿದ್ದ ಎನ್ನುವುದೇ ಇದರ ಅರ್ಥ ಎಂದು ಚೀನಾದ ಹೆಸರನ್ನು ಉಲ್ಲೇಖಿಸದೇ ಮಾತಿನಲ್ಲೇ ಮೋದಿ ತಿರುಗೇಟು ನೀಡಿದರು.
ವಿಸ್ತರಿಸುವ ಯುಗ ಮುಗಿದಿದೆ. ಈಗ ವಿಕಾಸವಾದ ಯುಗ ಆರಂಭವಾಗಿದೆ. ವಿಕಾಸವಾದ ಈಗ ಅವಶ್ಯಕತೆ ಇದೆ. ಕಷ್ಟದ ಕಾಲದಲ್ಲಿ ನಾವು ಜಯಗಳಿಸುತ್ತಲೇ ಇರೋಣ. ಆತ್ಮ ನಿರ್ಭರ ಭಾರತ್ ನಿರ್ಮಾಣ ಮಾಡಿದ ಬಳಿಕ ಭಾರತ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ದೇಶದ ಜನರು ನಿಮ್ಮೊಂದಿಗೆ ಇರಲಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ