
ಪ್ರಗತಿವಾಹಿನಿ ಸುದ್ದಿ, ಪಂಜಾಬ್ – ಭದ್ರತಾ ಲೋಪದಿಂದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ಲೈ ಓವರ್ ಒಂದರೆ ಮೇಲೆ ರೈತರ ಪ್ರತಿಭಟನೆಯಿಂದಾಗಿ ಒಂದು ಗಂಟೆ ಕಳೆಯಬೇಕಾದ ವಿಚಿತ್ರ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನಲ್ಲಿ ರ್್ಯಾಲಿ ನಡೆಸಲು ಹೋಗಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಬಳಸದೆ ರಸ್ತೆ ಮಾರ್ಗವಾಗಿ ಮೋದಿ ಹೊರಟಿದ್ದರು. ಇದಕ್ಕೆ ರಾಜ್ಯದ ಪೊಲೀಸ್ ಇಲಾಖೆ ಹಸಿರು ನಿಶಾನೆ ತೋರಿತ್ತು.
ಇಷ್ಟರ ಮಧ್ಯೆಯೂ ಪ್ರಧಾನಿ ತೆರಳುವಾಗ ರೈತರ ಪ್ರತಿಭಟನಾ ರ್ಯಾಲಿ ಎದುರಿಗೆ ಬಂದಿದೆ. ಪ್ರಧಾನಿ ಗಳು ಫ್ಲೈ ಓವರ್ ಒಂದರ ಮೇಲೆ ಒಂದು ಗಂಟೆ ಕಳೆಯಬೇಕಾಯಿತು.
ನಂತರ ರ್ಯಾಲಿ ರದ್ದು ಮಾಡಿದ ಮೋದಿ ವಾಪಸ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಾನು ಬದುಕಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ ಎಂದು ಅಲ್ಲಿರುವ ಅಧಿಕಾರಿಗಳಿಗೆ ಹೇಳಿದರು. ಇದು ಇಡೀ ಘಟನೆಯ ಗಂಭೀರತೆಯನ್ನು ಸಾರುವಂತಿದೆ.
ಘಟನೆಗೆ ರಾಷ್ಟ್ರಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘಟನೆ ಖಂಡಿಸಿ, ಪಂಜಾಬ್ ಸರಕಾರ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.
ದೇಶದ ಪ್ರಧಾನಿಗೆ ರಕ್ಷಣೆ ನೀಡಬೇಕಾದದ್ದು ಎಲ್ಲ ಸರಕಾರಗಳ ಕರ್ತವ್ಯ. ಆದರೆ ಪಂಜಾಬ್ ನಲ್ಲಿ ಅದು ಆಗದಿರುವುದು ಖಂಡನೀಯ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸೂಚನೆ