Latest

ಪೊಲೀಸರ ಕಿರುಕುಳ; ಆತ್ಮಹತ್ಯೆಗೆ ಶರಣಾದ ಯುವಕ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಹಣ ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರ ಕಿರುಕುಳ ತಾಳಲಾರದೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದಲ್ಲಿ ನಡೆದಿದೆ.

25 ವರ್ಷದ ಸೋಮನಾಥ ಆತ್ಮಹತ್ಯೆಗೆ ಶರಣಾದ ಯುವಕ. ಕೊಲ್ಹಾರದ ಬಳಿ ಕೃಷ್ಣಾನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಪಿಎಂಸಿ ಠಾಣೆ ಪಿಎಸ್ ಐ ಸೋಮೇಶ ಗೆಜ್ಜಿ ಅವರ ಸಹೋದರ ಸಚಿನ್ ಗೆಜ್ಜಿಯವರ ಕಾರಿನಲ್ಲಿದ್ದ 1 ಲಕ್ಷ ರೂಪಾಯಿ ಹಣವನ್ನು ಕದ್ದ ಆರೋಪ ಮೃತ ಯುವಕ ಸೋಮನಾಥ್ ಮೇಲೆ ಬಂದಿತ್ತು. ಇದೇ ವಿಚಾರವಾಗಿ ಯುವಕನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದ ಹಿರಿಯ ಪೊಲೀಸರು, ಯುವಕನನ್ನು ಥಳಿಸಿ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಪೊಲೀಸರ ಕಿರುಕುಳದ ಬಗ್ಗೆ ಫೇಸ್ ಬುಕ್ ನಲ್ಲಿ ಆರೋಪಿಸಿರುವ ಯುವಕ ಸೋಮನಾಥ್, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Home add -Advt

ನನ್ನ ವಿರಿದ್ಧ ಹಣ ಕದ್ದ ಸುಳ್ಳು ಆರೋಪ ಮಾಡಲಾಗಿದೆ. ಪಿಎಸ್ ಐ ಸೋಮೇಶ ಗೆಜ್ಜಿ, ಸಹೋದರ ಸಚಿನ್ ಗೆಜ್ಜಿ, ಎಸ್ ಐ ಸೋಮೇಶ, ರವಿ ದೇಗಿನಾಳ, ಸಂತೋಷ್ ದೇಗಿನಾಳ ನನ್ನ ಸಾವಿಗೆ ಕಾರಣ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ.

ಕಳೆದ 5 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಇದೀಗ ಕೃಷ್ಣಾನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ADGP ಅಮೃತ್ ಪೌಲ್ CID ಕಸ್ಟಡಿಗೆ

Related Articles

Back to top button