Latest

ಠಾಣೆ ಮುಂದೆ ನಿಲ್ಲಿಸಿದ್ದ ಪೊಲೀಸ್ ಜೀಪನ್ನೇ ಕದ್ದು ಪರಾರಿಯಾದ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಪೊಲೀಸ್ ಜೀಪನ್ನೇ ಕದ್ದು ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ನಾಗಪ್ಪ ಹಡಪದ ಪೊಲೀಸ್ ವಾಹನವನ್ನೇ ಕದ್ದ ಆರೋಪಿ. ಠಾಣೆ ಮುಂದೆ ನಿಲ್ಲಿಸಿದ್ದ ಪೊಲೀಸ್ ವಾಹನವನ್ನು ಕದ್ದು, ಬ್ಯಾಡಗಿವರೆಗೂ ಹೋಗಿದ್ದಾನೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ವಾಹನ ಪತ್ತೆ ಮಾಡಿದ್ದಾರೆ.

Home add -Advt

ಅಣ್ಣಿಗೇರಿ ಪೊಲೀಸ್ ಠಾಣಾ ಸಿಬ್ಬಂದಿಗಳು ವಾಹನ ಬಳಸಿ, ಬಳಿಕ ವಾಹನದಲ್ಲಿಯೇ ಕೀ ಬಿಟ್ಟಿದ್ದರು. ಇದನ್ನು ಗಮನಿಸಿದ ನಾಗಪ್ಪ ಹಡಪದ ವಾಹನ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಆರೋಪಿಯನ್ನು ಬ್ಯಾಡಗಿಯಲ್ಲಿ ಹಿಡಿದು ವಾಪಸ್ ಠಾಣೆಗೆ ಕರೆ ತಂದಿದ್ದಾರೆ.
ಬಜೆಟ್ ಬೆನ್ನಲ್ಲೇ ಆಭರಣ ಪ್ರಿಯರಿಗೆ ಶಾಕ್

Related Articles

Back to top button