Belagavi NewsBelgaum News
*ಜಾತ್ರೆಯಲ್ಲಿ 5 ದಿನವೂ ಅನ್ನ ದಾಸೋಹ*

ಪ್ರಗತಿವಾಹಿನಿ ಸುದ್ದಿ: ಹೊನ್ನಿಹಾಳ ಗ್ರಾಮದ ಶ್ರೀ ವಿಠ್ಠಲ ಬೀರದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷ್ಮೀ ತಾಯಿ ಪೌಂಡೇಷನ್ ವತಿಯಿಂದ ಸತತ 5 ದಿನಗಳ ಕಾಲ ಅನ್ನ ದಾಸೋಹ ಸೇವೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಹಿರಿಯರು ಭಾನುವಾರ ಆಗಮಿಸಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಜಾತ್ರೆಯ ಆಮಂತ್ರಣ ನೀಡಿ, ಸನ್ಮಾನಿಸಿದರು.
ಜಾತ್ರೆಗೆ ಶುಭ ಹಾರೈಸಿದ ಚನ್ನರಾಜ ಹಟ್ಟಿಹೊಳಿ, ದೇವರು ಗ್ರಾಮದ ಸಮಸ್ತ ಜನತೆಗೆ ಒಳಿತನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸಿದರು.


