Belagavi NewsBelgaum NewsElection NewsKannada NewsKarnataka NewsPolitics

ಜನರ ಒಡನಾಟದಿಂದಲೇ ಪ್ರಿಯಂಕಾ ಗೆಲುವು:ಸಚಿವ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಲು ಕಾಂಗ್ರೆಸ್‌ ಪಕ್ಷ, ವರಿಷ್ಠರೇ ಕಾರಣ. ಏಕೆಂದರೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗುರುತಿಸಿ ಟಿಕೆಟ್‌ ನೀಡಿದ್ದು ವರಿಷ್ಠರು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಅಭಿವೃದ್ಧಿ ಯೋಜನೆಗಳು, ಗ್ಯಾರಂಟಿಗಳು, ನಾವು ಕಳೆದ 30 ವರ್ಷಗಳಿಂದ ಜನಸೇವೆ ಮಾಡಿದ್ದು ಪ್ರಿಯಂಕಾ ಜಾರಕಿಹೊಳಿ ಗೆಲುವಿಗೆ ಸಹಕಾರಿಯಾಗಿದೆ ಎಂದರು.

Home add -Advt

ಇನ್ನು ಜನ ಯಾರನ್ನು ಸುಲಭವಾಗಿ ನಂಬಲ್ಲ. ಪಕ್ಷವನ್ನು ನೋಡುತ್ತಾರೆ. ವ್ಯಕ್ತಿಯನ್ನು ನೋಡುತ್ತಾರೆ. ಜನರೊಂದಿಗೆ ನಿರಂತರ ಒಡನಾಟ ಹೊಂದಿದ್ದರಿಂದ ಜನರು ಪ್ರಿಯಂಕಾ ಜಾರಕಿಹೊಳಿ ಅವರನ್ನು ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು. 

ಸ್ವ-ಪಕ್ಷದವರಿಂದ ನಮ್ಮ ಗೆಲುವಿನ ಅಂತರ ಕಡಿಮೆಯಾಗಿದ್ದು, ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದ್ದಾರೆಂದು ಕೆಪಿಸಿಸಿ ಗಮನಕ್ಕೂ ತರುತ್ತೇನೆ. ಚುನಾವಣೆಯಲ್ಲಿಯೂ ತಂತ್ರ-ಕುತಂತ್ರಗಳು ಸಾಮಾನ್ಯವಾಗಿ ಕಾಣುತ್ತೇವೆ ಎಂದ ಅವರು, ಇನ್ನು ಬೆಳಗಾವಿ ಫಲಿಂತಾಶ ಬಗ್ಗೆ ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ಬೆಳಗಾವಿ ಸೋಲಿಗೆ ಸಾಕಷ್ಟು ಕಾರಣಗಳಿವೆ. ಅವುಗಳನ್ನು ಸರಿಪಡಿಸಿಕೊಂಡಿದ್ದರೆ ಗೆಲುವು ನಮ್ಮದಾಗುತ್ತಿತ್ತು. ವಿರೋಧಿಗಳ ತಂತ್ರಗಳನ್ನು ನಾವು ತಿಳಿದು ಚುನಾವಣೆ ಎದುರಿಸಬೇಕು. ಹಾಗೂ ಸಾರ್ವಜನಿಕ ಜೀವನದಲ್ಲಿ ಬಹಳ ಸೂಕ್ಷ್ಮವಾಗಿ ಇರುವುದು ಮುಖ್ಯವಾಗಿದೆ ಎಂದರು.

Related Articles

Back to top button