Belagavi NewsBelgaum NewsKannada NewsKarnataka NewsNational

*IPS ಅಧಿಕಾರಿಗಳಿಗೆ ಬಡ್ತಿ ಹಾಗೂ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ: ಆಡಳಿತ ವಿಭಾಗದಲ್ಲಿ ರಾಜ್ಯ ಸರ್ಕಾರ ಮೇಜರ್​ ಸರ್ಜರಿ ಮಾಡಿದ್ದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ 67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರನ್ನು ಸರ್ಕಾರ ಬಡ್ತಿ ನೀಡಿದೆ. ಜೊತೆಗೆ ಐಜಿ ವಿಕಾಸ ಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.‌

IPS ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ

ರಮಣ ಗುಪ್ತಾ: ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ, ಚೇತನ್ ಸಿಂಗ್ ರಾಥೋಡ್: ಐಜಿಪಿ, ಈಶಾನ್ಯ ವಲಯ (ಬೆಳಗಾವಿ), ವಿಕಾಸ್ ಕುಮಾರ್: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ, ಅಮಿತ್ ಸಿಂಗ್: ಐಜಿಪಿ, ಪಶ್ಚಿಮ ವಲಯ(ಮಂಗಳೂರು), ವಂಶಿಕೃಷ್ಣ: ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು, ಕಾರ್ತಿಕ್ ರೆಡ್ಡಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ, ಕುಲದೀಪ್ ಕುಮಾರ್ ಜೈನ್: ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ, ಸಂತೋಷ್ ಬಾಬು: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ, ಇಶಾ ಪಂತ್: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ, ಜಿ.ಸಂಗೀತಾ: ಡಿಐಜಿ, ಸಿಐಡಿ ಅರಣ್ಯ ಘಟಕ, ಸೀಮಾ ಲಾಟ್ಕರ್: ಡಿಐಜಿ, ಮೈಸೂರು ಕಮಿಷನರ್ ಆಗಿ ಮುಂದುವರಿಕೆ, ರೇಣುಕಾ ಕೆ.ಸುಕುಮಾರ್: ಡಿಐಜಿಯಾಗಿ ಬಡ್ತಿ, ಡಿಸಿಆರ್​ಇ, ಬೆಂಗಳೂರು, ಡಾ.ಭೀಮಾಶಂಕರ ಗುಳೇದ್: ಬೆಳಗಾವಿ ಎಸ್​ಪಿಯಾಗಿ ಮುಂದುವರಿಕೆ, ಎನ್​ ಶಶಿ ಕುಮಾರ್: ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ಹುಬ್ಬಳ್ಳಿ-ಧಾರವಾಡ ನಗರ, ಡಾ.ವೈ.ಎಸ್. ರವಿ ಕುಮಾರ್: ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್​ ಆಗಿ ಬಡ್ತಿ (ಇಂಟಲಿಜೆನ್ಸ್), ಬೆಂಗಳೂರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button