CrimeKannada NewsKarnataka NewsLatest

*ಪೊಲೀಸ್ ಠಾಣೆಯಲ್ಲಿ ವಿಕೃತಿ ಮೆರೆದ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ: ಇಂತವರು ಹೇಗೆ ಆಯ್ಕೆಯಾಗಿ ಬರುತ್ತಾರೋ ನಾಚಿಕೆಯಾಗುತ್ತೆ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ*

ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣವೊಂದರಲ್ಲಿ ಅಪ್ರಾಪ್ತ ಬಾಲಕರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಹೆಸರಲ್ಲಿ ದೌರ್ಜನ್ಯವೆಸಗಿದ್ದ ಪಿಎಸ್ಐ ಪ್ರವೀಣ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಮೃತಹಳ್ಳಿ ಠಾಣೆ ಪಿಎಸ್ಐ ಪ್ರವೀಣ್ ನನ್ನು ಸಸ್ಪೆಂಡ್ ಮಾಡಲಾಗಿದೆ. ಆತನ ವಿರುದ್ಧ ತನಿಖೆ ಮುಂದುವರೆದಿದೆ ಎಂದರು. ಪೊಲೀಸ್ ಠಾಣೆಯಲ್ಲಿಯೇ ಬಾಲಕನ ಮೇಲೆ ವಿಕೃತಿ ಮೆರೆದಿದ್ದಾರೆ. ಅದನ್ನು ಮೊಬೈಲ್ ನಲ್ಲಿ ಪೊಲೀಸರೇ ರೆಕಾರ್ಡ್ ಕೂಡ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹವರು ಹೇಗೆ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಬರುತ್ತಾರೋ ನಮಗೇ ನಾಚಿಕೆಯಾಗುತ್ತೆ. ಪೊಲೀಸ್ ಠಾಣೆಯೊಳಗೆ ದೌರ್ಜನ್ಯವೆಸಗಲಾಗಿದೆ. ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಒಲೀಸರಿಂದಲೇ ಈ ರೀತಿ ವರ್ತನೆ ಅಸಹ್ಯವೆನಿಸುತ್ತದೆ ಎಂದು ಕಿಡಿಕಾರಿದ್ದಾರೆ.

Home add -Advt

ಕೆಲ ತಿಂಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುವುದಾಗ ಪಿಎಸ್ ಐ ಪ್ರವೀಣ್, ಬಾಲಕರ ಮೇಲೆ ದೌಜ್ಯನ್ಯವೆಸಗಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಒಬ್ಬ ಆರೋಪಿಯ ಮರ್ಮಾಂಗವನ್ನು ಇನ್ನೊಬ್ಬ ಆರೋಪಿಯ ಬಾಯಿಗೆ ಇರಿಸಿ ವಿಕ್ರ‍ಿತಿ ಮೆರೆದಿದ್ದಾರೆ. ಬೆಲ್ಟ್ ನಿಂದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಇಟ್ತುಕೊಳ್ಳಲಾಗಿತ್ತು ಎಂಬ ಆರೋಪವಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪೊಕ್ಸೋ ಕೇಸ್ ದಾಖಲಿಸಿ ಪಿಎಸ್ ಐ ನನ್ನು ಬಂಧಿಸಿದ್ದಾರೆ.

Related Articles

Back to top button