Kannada NewsLatest

ಬಿಜೆಪಿ ಆಫರ್ ಬಗ್ಗೆ ಯೂಟರ್ನ್ ಹೊಡೆದ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿಗೆ ಬರುವ ಮುನ್ನ ಹಣದ ಆಫರ್ ಕೊಟ್ಟಿದ್ದರು ಎಂದು ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಇಂದು ಯೂಟರ್ನ್ ಹೊಡೆದಿದ್ದು, ಯಾವುದೇ ಆಫರ್ ನೀಡಿಲ್ಲ ಎಮ್ದು ಹೇಳಿದ್ದಾರೆ.

ಬೆಳಗಾವಿಯ ಕಿತ್ತೂರಿನಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ವೇಳೆ ಯಾರೂ ಆಮಿಷ ನೀಡಿಲ್ಲ. ನಾನೇ ಬಿಜೆಪಿ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಂದಿದ್ದೀರಿ ಎಂದು ಕೇಳಿದ್ದರು. ನನ್ನದು ಯಾವುದೇ ಅಪೇಕ್ಷೆ ಇಲ್ಲ. ಒಬೆಂಬಲ ಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ಕೇಳಿದ್ದೆ ಎಂದು ಹೇಳಿದ್ದಾರೆ.

Home add -Advt

ಪ್ರಧಾನಿ ಮೋದಿಯವರ ಕೆಲಸ, ಬಿಜೆಪಿ ವಿಚಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ದೆ ಎಂದು ತಿಳಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಬರುವ ಮುನ್ನ ಹಣದ ಆಫರ್ ಕೊಟ್ಟಿದ್ದರು ಎಂಬ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ಗುಜರಾತ್ ನೂತನ ಸಿಎಂ ಸ್ಥಾನಕ್ಕೆ ಅಚ್ಚರಿ ಹೆಸರು ಘೋಷಣೆ

Related Articles

Back to top button