ನನ್ನನ್ನು ಮಂತ್ರಿ ಮಾಡುವುದಾಗಿ ಸಿಎಂ ಭರವಸೆ: ಆರ್.ಶಂಕರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನನ್ನನ್ನು ಮಂತ್ರಿ ಮಾಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಾಗಾಗಿ ಮಂತ್ರಿ ಮಾಡುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 6 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿ, 17 ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ 17 ಜನರಿಗೂ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ನಂಬಿ ಬಂದವರಿಗೆ ಮೋಸವಾಗುತ್ತದೆ ಎಂದರು.

Home add -Advt

ನನ್ನನ್ನು ಮಂತ್ರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು. ಬಿ.ಎಲ್ ಸಂತೋಷ್ ಕೂಡ 16 ಸ್ಥಾನ ಖಾಲಿ ಇಟ್ಟಿದ್ದಾಗಿ ಹೇಳಿದ್ದಾರೆ. ಮಂತ್ರಿ ಮಾಡುವ ವಿಶ್ವಾಸವಿದೆ. ಕಾದುನೋಡುವುದು ನಮ್ಮ ಮೊದಲ ಆದ್ಯತೆ. ಸಧ್ಯಕ್ಕೆ ಬೇರೆ ಯೋಚನೆ ಇಲ್ಲ. ಒಂದು ವೇಳೆ ಅವರು ಮಂತ್ರಿ ಮಾಡದಿದ್ದರೆ ಮಾತ್ರ ಮುಂದಿನ ಯೋಚನೆ ಮಾಡುವುದಾಗಿ ತಿಳಿಸಿದರು.

Related Articles

Back to top button