Latest

ಡ್ಯಾಂನಿಂದ ನೀರು ಹೊರಕ್ಕೆ: ಹಳ್ಳದ ಮಧ್ಯೆ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ರಾಯಚೂರು:  ರಾಜ್ಯದ ಹಲವೆಡೆ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೂ ಭಾರಿ ಮಳೆಯಾಗುತ್ತಿದೆ. ರಾಯಚೂರಿನ ಮಸ್ಕಿ ಡ್ಯಾಂ ನಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ವ್ಯಕ್ತಿಯೋರ್ವ ನದಿ ನೀರಿನ ಮಧ್ಯೆ ಸಿಲುಕಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿರುವ ಘಟನೆ ನಡೆದಿದೆ.

ಮಸ್ಕಿ ಹೊರವಲಯದ ಹಳ್ಳದ ಮಧ್ಯೆ ವ್ಯಕ್ತಿಯೋರ್ವ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಅಂಗಲಾಚಿದ್ದಾನೆ. ಮಸ್ಕಿ ಡ್ಯಾಂ ನಿಂದ ಏಕಾಏಕಿ ನೀರು ಹೊರ ಬಿಟ್ಟ ಪರಿಣಾಮ ಕ್ಷಣಮಾತ್ರದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.

ಹಳ್ಳದಲ್ಲಿ ಸಿಲುಕಿರುವ ವ್ಯಕ್ತಿಯ ರಕ್ಷಣೆಗೆ ಪೊಲೀಸರು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.

Related Articles

Back to top button