*1 ಲಕ್ಷ ರಾಮ ಭಕ್ತರಿಂದ ಪ್ರಧಾನಿಗೆ ಪತ್ರದ ಮೂಲಕ ಅಭಿನಂದನೆ*
ರಾಮ ಮಂದಿರ ಸ್ಥಾಪನೆಯ ಕನಸು ನನಸು ಹಿನ್ನೆಲೆ
ಪ್ರಗತಿವಾಹಿನಿ ಸುದ್ದಿ: ಹಿಂದೂಗಳ ಅಸ್ಮಿತತೆಯ ಶ್ರದ್ದಾಕೇಂದ್ರವಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟುವದರೊಂದಿಗೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಮಾಡಿದ ದೇಶದ ನೆಚ್ಚಿನ ಪ್ರಧಾನಿಯವರಿಗೆ ಜಿಲ್ಲೆಯಿಂದ ಒಂದು ಲಕ್ಷ ರಾಮ ಭಕ್ತರು ಪತ್ರದ ಮುಖಾಂತರ ಪ್ರಧಾನಿಗೆ ಅಭಿನಂದನೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.
ನಗರದ ಮುಖ್ಯ ಅಂಚೆ ಕಛೇರಿಯ ಮೂಲಕ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಕಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಐನೂರು ವರ್ಷಗಳ ಸಂಘರ್ಷದ ಇತಿಹಾಸ ಹೊಂದಿದ ರಾಮ ಮಂದಿರ ವಿವಾದ ಸಂಪೂರ್ಣವಾಗಿ ಇತ್ಯಾರ್ಥವಾಗಿದ್ದು ಬಹುದಿನಗಳ ರಾಮ ಮಂದಿರ ಸ್ಥಾಪನೆಯ ಕನಸು ನನಸು ಮಾಡಿದ ಪ್ರಧಾನಿಗಳ ಕಾರ್ಯಕ್ಕೆ ಪ್ರಪಂಚವೆ ಅಭಿನಂದನೆ ಸಲ್ಲಿಸುತ್ತಿದೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಂದ ಕನಿಷ್ಟ 1ಲಕ್ಷ ರಾಮ ಭಕ್ತರು ಪ್ರಧಾನಿಗಳಿಗೆ ಪತ್ರದ ಮೂಲಕ ಅಭಿನಂನದೆ ಸಲ್ಲಿಸಲಿದ್ದಾರೆ ಎಂದರು.
ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಪ್ರತಿದಿನ 5 ಲಕ್ಷಕ್ಕೂ ಹೆಚ್ಚು ರಾಮ ಭಕ್ತರು ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಪಡೆಯುತ್ತಿದ್ದು ಇಂತಹ ಭಾಗ್ಯವನ್ನು ನಮ್ಮ ಜೀವಿತಾವಧಿಯಲ್ಲಿ ತಂದು ಕೊಟ್ಟ ಪ್ರಧಾನಿಗಳ ಈ ಕಾರ್ಯವಮ್ನು ಜಗಮೆಚ್ಚಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ ಜೈಕಾರದ ಘೋಷಣೆ ಹಾಕಿದರು. ರಾಜ್ಯ ಯುವ ಮೊರ್ಚಾ ಕಾರ್ಯದರ್ಯ ಈರಣ್ಣ ಅಂಗಡಿ,
ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ, ವೀರಭದ್ರ ಪುಜಾರಿ, ವಿನೋದ ಒಲೆಕಾರ, ಈರಪ್ಪ ಡವಳೇಶ್ವರ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ