Latest

*ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ನೇತೃತ್ವದ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಜತೆಗೂಡಿ ಪ್ರಗತಿಪರ ಕೆಲಸವನ್ನು ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಡೀ ದೇಶ, ನಾಡು ಕಟ್ಟಲು ಒಂದಾಗಿ ಕೆಲಸ ಮಾಡಿದರೆ, ಅದು ಯಶಸ್ವಿಯಾಗುತ್ತದೆ. ಯಶೋಗಾಥೆಯ ಪಥದಲ್ಲಿ ನಾವು ನಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಕೆ.ಎಲ್.ಇ ಸಂಸ್ಥೆಯ ಬಿ.ವಿ ಭೂಮರೆಡ್ಡಿ ತಾಂತ್ರಿಕ ವಿಶ್ವವಿದ್ಯಾಲಯ ಏರ್ಪಡಿಸಿರುವ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Home add -Advt

ಬಿವಿಬಿ ಕಾಲೇಜು ಉತ್ತಮವಾಗಿ ಬೆಳೆದಿದೆ. ಈಗ ಕ್ಯಾಂಪಸ್ ಗೆ ಬಂದಾಗ ನಾನು ವಿದ್ಯಾರ್ಥಿ ಆಗಬೇಕಿತ್ತು ಅನಿಸುತ್ತದೆ. ಆಗ ಕೇವಲ ಮೂರು ಸೆಕ್ಸನ್ ಗಳು ಮಾತ್ರ ಇದ್ದವು. ಕ್ಯಾಂಟೀನ್ ನನ್ನ ಬಹಳ ಇಷ್ಟದ ಸ್ಥಳ. ಈಗ ಅಲ್ಲಿ ರಿಸ್ಟ್ರಿಕ್ಷನ್ ಹಾಕಿದ್ದಾರೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಯಿಸಿಕೊಂಡರು.

ಭಾರತ ದೇಶ ವಿಶ್ವದಲ್ಲಿ ಅತ್ಯಂತ ಸದೃಢ, ಸುರಕ್ಷಿತ ಮತ್ತು ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರ. ನಾವು ಅಮೃತ ಮಹೋತ್ಸವ ಮಾಡಿದ್ದೇವೆ.‌ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಅಮೃತ ಕಾಲ ಅಂತ ಹೇಳಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ಬಿವಿಬಿ ಕಾಲೇಜು, ಕೆಎಲ್ಇ ಸಂಸ್ಥೆ ನವ ಭಾರತದ ನಿರ್ಮಾಣದಲ್ಲಿ ಪಾತ್ರವಹಿಸಲು ಎಲ್ಲ ಸಿದ್ದತೆ ಮಾಡಿಕೊಂಡಿದೆ. ಸಂಸ್ಥೆಯ ಸಾಧನೆಯಿಂದ ನನಗೆ ಬಹಳ ಸಂತೋಷವಾಗಿದ್ದು, ಈ ಸಂಸ್ಥೆ ದೇಶ ಕಟ್ಟುವುದರಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿ, ನಾವು ಬದುಕಿನಲ್ಲಿ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ, ನಾವು ಕಲಿತ ಶಾಲೆ, ಗುರುಗಳನ್ನು ಎಂದು ಕೂಡ ಮರೆಯಬಾರದು. ಅದು ನಮ್ಮ ಧರ್ಮ. ಎಲ್ಲರೂ ಅದನ್ನು ನಿಭಾಯಿಸಿ, ಸಂಸ್ಥೆಗೆ ಏನನ್ನು ಕೊಡಲು ಸಾಧ್ಯವಿದ್ದಷ್ಟು ಮಾಡಬೇಕು ಎಂದರು.

ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಪ್ರಧಾನಿಯವರು ಐದು ಟ್ರಿಲಿಯನ್ ಆರ್ಥಿಕತೆಯ ಬಗ್ಗೆ ಹೇಳಿದ್ದಾರೆ‌. ಅದರಲ್ಲಿ ನಮ್ಮ ರಾಜ್ಯದಿಂದ 1 ಟ್ರಿಲಿಯನ್ ಆರ್ಥಿಕತೆ ಗುರಿಯ ಸಾಧನೆಯನ್ನು 2025ರೊಳಗೆ ಮಾಡಬೇಕು ಎನ್ನುವ ಕ್ರಮಗಳನ್ನು ನಾವು ಮಾಡಿದ್ದೇವೆ ಎಂದರು.

ಆರ್ಥಿಕವಾಗಿ ಒಂದು ರಾಜ್ಯ ಬೆಳೆದರೆ, ಶೈಕ್ಷಣಿಕವಾಗಿ ಆರೋಗ್ಯದಿಂದ ನಮ್ಮ ಯುವಕರ ಕೈಗೆ ಕೆಲಸ ಸಿಗುತ್ತದೆ. ಸ್ವಾವಲಂಬನೆ ಬದುಕು ಬದುಕಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಕರ್ನಾಟಕ ಪ್ರಗತಿಯಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ನಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಮೊದಲ ಸೆಮಿ ಕಂಡಕ್ಟರ್, ಮೊದಲ ಆರ್ ಆ್ಯಂಡ್ ಡಿ ಪಾಲಸಿಯನ್ನು ಕರ್ನಾಟಕದಲ್ಲಿ ತಂದಿದ್ದೇವೆ. ಮೊದಲ ಎಂಪ್ಲಾಯ್ಮೆಂಟ್ ಪಾಲಿಸಿಯನ್ನು ಮಾಡಿದ್ದೇವೆ ಎಂದರು.

ಅಮಿತ್ ಶಾ ಅವರು ಗೃಹ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಿದ್ದಾರೆ. ಕರ್ನಾಟಕಕ್ಕೆ ಫಾರೆನ್ಸಿಕ್ ಲ್ಯಾಬ್ ಯೂನಿವರ್ಸಿಟಿಯನ್ನು ಕೊಟ್ಟಿದ್ದಾರೆ. ಅಲ್ಲದೇ ಮಹಿಳೆಯರ ರಕ್ಷಣೆಗಾಗಿ ಸುಮಾರು 700 ಕೋಟಿ ರೂ ಅನುದಾನ ನೀಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ 450 ಕೋಟಿ ರೂಪಾಯಿಯ ಯೋಜನೆ ಕೊಟ್ಟಿದ್ದಾರೆ. ಅಮಿತ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಕ್ರಾಂತಿಯಾಗಿ, ಕರ್ನಾಟಕ ಮತ್ತು ಗುಜರಾತಿನಲ್ಲಿ ದೊಡ್ಡ ಪ್ರಮಾಣದ ಶಕ್ತಿಯಾಗಿ ಹೊರಹೊಮ್ಮಿ, ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

ಕೆಎಲ್ಇ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಸಂಶೊಧನೆಗೆ ಉತ್ತಮ ಕೊಡುಗೆ ನೀಡುತ್ತಿದೆ. ಅದನ್ನು ಎಲ್ಲರೂ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯ. ಬಿವಿಬಿ ಕಾಲೇಜಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪಾರ್ಟಿ ಕೋಡೋಣ ಎಂದ ಸಿಎಂ ಬೊಮ್ಮಾಯಿ‌:

ಕೆಎಲ್ಇ ಸಂಸ್ಥೆಯ ಬಿವಿಬಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಷಣಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ಜನ್ಮದಿನಕ್ಕೆ ಶುಭ ಕೋರಿ, ಪಾರ್ಟಿ ಕೇಳಿದರು. ಭಾಷಣದ ಆರಂಭಕ್ಕೂ ಮುನ್ನ ಮಕ್ಕಳಿಂದ ಏಕಕಾಲಕ್ಕೆ “ಪಾರ್ಟಿ ಪಾರ್ಟಿ” ಎಂಬ ಕೂಗು ಕೇಳಿ ಬರುತ್ತಿದ್ದಂತ ಹಸನ್ಮುಖಿಯಾದ ಸಿಎಂ ಬಸವರಾಜ ಬೊಮ್ಮಾಯಿ‌ ಅವರು “ಪಾರ್ಟಿ ಕೋಡೋಣ” ಎಂದು ಹೇಳಿ ಭಾಷಣ ಆರಂಭಿಸಿದರು.

ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಮುರುಗೇಶ್ ನಿರಾಣಿ , ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 

*ನೇರಪ್ರಸಾರ*

https://fb.watch/ikuq0HDCBy/?mibextid=RUbZ1f

*ಭಾರತೀಯ ಸೇನಾ ವಿಮಾನಗಳ ನಡುವೆ ಭೀಕರ ಅಪಘಾತ; ಮೊರೆನಾ ಬಳಿ ಪತನಗೊಂಡ ಎರಡು ವಿಮಾನಗಳು*

https://pragati.taskdun.com/air-force-plane-crashmorena-fighter-jet-sukhoimiraj-plane-crash/

Related Articles

Back to top button