Kannada NewsKarnataka News

ಪ್ರವಾಹದ ಸಂದರ್ಭದ ಅಪರೂಪದ ಛಾಯಾಚಿತ್ರಗಳು; ಕಣ್ತುಂಬಿಕೊಳ್ಳಿ

ಬೆಳಗಾವಿಯ  ಪತ್ರಿಕಾ ಛಾಯಾಗ್ರಾಕರಾದ  ಅಮೃತ ಬಿರ್ಜೆ,  ಪಿಕೆ ಬಡಿಗೇರ , ಅರುಣ ಯಳ್ಳೂರಕರ, ವಿರಣ್ಣ ಇನಾಮತಿ, ಹರೀಶ ಗರಗ ಇವರ ಛಾಯಚಿತ್ರಗಳು ಆಯ್ಕೆ ಯಾಗಿವೆ.

 

ಪ್ರವಾಹದ ಸಂದರ್ಭದ ಅಪರೂಪದ ಛಾಯಾಚಿತ್ರಗಳು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪತ್ರಿಕಾ ರಂಗದಲ್ಲಿ ಛಾಯಾಗ್ರಾಹಕರ ಪಾತ್ರ ಬಹಳ ಮುಖ್ಯವಾದದ್ದು. ಒಂದು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದರೆ ಆ ಸುದ್ದಿಗೆ ಪೂರಕವಾಗಿ ಒಂದು ಛಾಯಾಚಿತ್ರವಿದ್ದರೆ ಆ ಚಿತ್ರ ಸುದ್ದಿಗೆ ಭಾರಿ ಮಹತ್ವ ತಂದುಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರ ಪಾತ್ರ ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಮಳೆಯಿರಲಿ, ಬಿಸಿಲಿರಲಿ ಛಾಯಾಗ್ರಾಹಕ ಮಾತ್ರ ಸುದ್ದಿಗಾಗಿ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಕೆಲಸ ಮಾಡುತ್ತಲೇ ಇರುತ್ತಾನೆ.
ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎದುರಾದ ಪ್ರವಾಹ ಪರಿಸ್ಥಿತಿಯಿಂದ ಆಗಿರುವ ಪರಿಸ್ಥಿತಿಗಳ ಚಿತ್ರಣವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಒಂದೇ ಸಮನೆ ಜೋರಾಗಿ ಶಬ್ದ ಮಾಡುತ್ತ ಸುರಿಯುತ್ತಿರುವ ಮಳೆ, ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಪ್ರವಾಹ ಇದ್ಯಾವುದನ್ನೂ ಲೆಕ್ಕಿಸದೇ ಛಾಯಾಗ್ರಾಹಕ ಪ್ರವಾಹದ ಪರಿಸ್ಥಿತಿಯ ಚಿತ್ರವನ್ನು ಸೆರೆಹಿಡಿಯಲು ತನ್ನ ಜೀವವನ್ನೇ ಒತ್ತೆಯಿಟ್ಟಿರುತ್ತಾನೆ. ಪ್ರವಾಹದಿಂದ ಎದುರಾದ ಸಮಸ್ಯೆಗಳ ಚಿತ್ರಗಳು ಛಾಯಾಗ್ರಾಹಕನ ಕ್ಯಾಮರಾದಲ್ಲಿ ಸೆರೆಯಾಗಿವೆ.
ಪ್ರವಾಹ ಸಂದರ್ಭದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿ ಅವರ ಬದುಕು ಮೂರಾಬಟ್ಟೆಯಾಗಿದೆ. ಇಂಥವರಿಗಾಗಿ ಸರ್ಕಾರ ಹಾಗೂ ಸಾರ್ವಜನಿಕರು ನೆರವಿನ ಹಸ್ತ ಚಾಚಿದ್ದಾರೆ. ಸಂತ್ರಸ್ತರ ಆಶ್ರಯ ತಾಣಗಳು, ಅವರಿಗಾಗಿ ಸಾರ್ವಜನಿಕರು ನೆರವು ನೀಡಿದ್ದ ಚಿತ್ರಗಳನ್ನೂ ಸಹ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ.

ಚಿತ್ರಗಳ ಪ್ರದರ್ಶನ

ಈ ಛಾಯಾಗ್ರಾಹಕರು ಸೆರೆ ಹಿಡಿದಿರುವ ಚಿತ್ರಗಳ ಪ್ರದರ್ಶನವನ್ನು ಇದೇ ಸೆಪ್ಟೆಂಬರ್ ತಿಂಗಳ ೧೮ ರಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದೆ.
ರಾಜ್ಯದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಹುಬ್ಬಳ್ಳಿ, ಧಾರವವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ, ಕೊಪ್ಪಳ, ಬಳ್ಳಾರಿ, ಕೊಡಗು, ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕಾ ಛಾಯಾಗ್ರಾಹಕರು ತಾವು ಸೆರೆಹಿಡಿದಿರುವ ಚಿತ್ರಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಿದ್ದಾರೆ.

ಬೆಳಗಾವಿಯ  ಪತ್ರಿಕಾ ಛಾಯಾಗ್ರಾಕರಾದ  ಅಮೃತ ಬಿರ್ಜೆ,  ಪಿಕೆ ಬಡಿಗೇರ , ಅರುಣ ಯಳ್ಳೂರಕರ, ವಿರಣ್ಣ ಇನಾಮತಿ, ಹರೀಶ ಗರಗ ಇವರ ಛಾಯಚಿತ್ರಗಳು ಆಯ್ಕೆ ಯಾಗಿವೆ.

ಇಂತಹ ಸಾಹಸಮಯ ಅದ್ಭುತವಾದ ಛಾಯಾಚಿತ್ರಗಳನ್ನು ಒಮ್ಮೆ ತಾವುಗಳು ವೀಕ್ಷಿಸಿದರೆ ಛಾಯಾಗ್ರಾಹಕರ ಸಾಹಸ ಏನೆಂಬುದು ತಮಗೆ ಮನವರಿಕೆಯಾಗಲಿದೆ.
ಇಂತಹ ಛಾಯಾಗ್ರಾಹಕರು ಇತ್ತೀಚೆಗೆ ಸಂಘಟಿತರಾಗಿ ತಮ್ಮದೇ ಆದ ಸ್ವಂತ ಸಂಘವನ್ನು ರಾಜ್ಯಮಟ್ಟದಲ್ಲಿ ಸಂಘಟನೆ ಮಾಡಿ ಸ್ಥಾಪನೆ ಮಾಡಿಕೊಂಡಿದ್ದಾರೆ.
ಸುಮಾರು ೨೦೦ ಕ್ಕೂ ಹೆಚ್ಚು ಛಾಯಾಗ್ರಾಹಕರು ರಾಜ್ಯಮಟ್ಟದ ಸಂಘದಲ್ಲಿ ತಮ್ಮ ಸದಸ್ಯತ್ವವನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಸಂಘದ ಉದ್ಘಾಟನೆಯನ್ನು ಈ ತಿಂಗಳ ೧೮ ರಂದು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವೇರಿಸಲಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button