Latest

ಇ-ಆಡಳಿತದಲ್ಲಿ ತಂತ್ರಾಂಶ ಮತ್ತು ದತ್ತಾಂಶ ಸುರಕ್ಷತೆಗೆ ಒತ್ತು ನೀಡಲು ಸಿಎಂ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇ-ಆಡಳಿತದಲ್ಲಿ ತಂತ್ರಾಂಶಗಳ ಸುರಕ್ಷತೆ ಹಾಗೂ ಅವುಗಳನ್ನು ಬಳಸುವ ನಾಗರಿಕರ ದತ್ತಾಂಶದ ಸುರಕ್ಷತೆಗೆ ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ- ಆಡಳಿತ) ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಅರ್ಜಿ ಸಲ್ಲಿಸದೆಯೇ ನೇರವಾಗಿ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಪೂರಕವಾಗಿರುವ ಕುಟುಂಬ, ಕೃಷಿ ಇಲಾಖೆಯ ಪ್ರೂಟ್ಸ್, ಬೆಳೆವಿಮೆ ನಿರ್ವಹಣೆಯ ಸಂರಕ್ಷಣೆ ಮತ್ತು ಇತರ ಯೋಜನೆಗಳ ಕುರಿತು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Home add -Advt

ಆದರೆ ಮಾನವ ಸಂಪನ್ಮೂಲದ ದೃಷ್ಟಿಯಿಂದ ಇಲಾಖೆಯು ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ. ಹಾಗೂ ಇಲಾಖೆಯ ತಂತ್ರಾಂಶ ಹಾಗೂ ತಂತ್ರಜ್ಞಾನದ ದುರುಪಯೋಗಕ್ಕೆ ಹೊಣೆಗಾರಿಕೆ ನಿಗದಿ ಪಡಿಸುವ ಅಗತ್ಯವಿದೆ. ಇ-ಆಡಳಿತದಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸರಿಪಡಿಸಲು ಸಿಬ್ಬಂದಿ ನಿಯೋಜಿಸುವಂತೆ ಸಲಹೆ ನೀಡಿದರು.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ನಾಗರಿಕ ಸೇವೆಗಳನ್ನು ಪೂರೈಸುವ ಸೇವಾಕೇಂದ್ರಗಳನ್ನು ಸ್ಥಾಪಿಸಲು ಸಲಹೆ ನೀಡಿದರು. ಈ ಕೇಂದ್ರಗಳಲ್ಲಿ ಜನರಿಗೆ ಅತಿ ಅಗತ್ಯವಿರುವ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಂತೆ ಸೂಚಿಸಿದರು. ಈ ಸೌಲಭ್ಯವನ್ನು ಜನವರಿ 26ರಂದು ಲೋಕಾರ್ಪಣೆಗೊಳಿಸಲಾಗುವುದು. ಜನಸಂಖ್ಯೆ ಆಧರಿಸಿ, ಈ ಸೇವಾಕೇಂದ್ರಗಳ ಸಂಖ್ಯೆ ನಿಗದಿ ಪಡಿಸುವಂತೆ ಸೂಚಿಸಿದರು.

ವೃದ್ಧಾಶ್ರಮಗಳ ನಿರ್ವಹಣೆಗೆ15 ಲಕ್ಷ ರೂ.ಗಳಿಗೆ ಅನುದಾನ ಹೆಚ್ಚಳ

Related Articles

Back to top button