
ಪ್ರಗತಿವಾಹಿನಿ ಸುದ್ದಿ: ಇದುವರೆಗೂ ಕಪ್ ಗೆಲ್ಲದಿದ್ರೂ ಆರ್ ಸಿ ಬಿ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡದ ಕೈಬಿಟ್ಟಿಲ್ಲ. ಸೀಸನ್ ನಿಂದ ಸೀಸನ್ ಗೆ ಆರ್ ಸಿ ಬಿ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ.
ಮೊನ್ನೆ ಮೊನ್ನೆಯಷ್ಟೇ ಚೆಪಾಕ್ ನಲ್ಲಿ ನಡೆದ ಆರ್.ಸಿ.ಬಿ V/S ಸಿ ಎಸ್ ಕೆ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಗೆ ಸೋಲಿನ ರುಚಿ ತೋರಿಸಿದ್ದರು. ಇದರ ಬೆನ್ನಲ್ಲೇ ಇನ್ ಸ್ಟಾಗ್ರಾಂ ಫಾಲೋಯಿಂಗ್ ನಲ್ಲೂ ಕೂಡ RCB, 5 ಬಾರಿ ಕಪ್ ಗೆದ್ದಿರುವ CSK ತಂಡವನ್ನು ಹಿಂದಿಕ್ಕಿದೆ.
ಇದುವರೆಗೂ ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿ ಬಳಗವನ್ನು ಅರ್ಥಾತ್ ಫಾಲೋವರ್ಸ್ ಗಳನ್ನು ಹೊಂದಿದ್ದ ಫ್ರಾಂಚೈಸಿ ಅಂದ್ರೆ ಅದು ಚೆನ್ನೈ ತಂಡ. ಇದುವರೆಗೂ ಬರೊಬ್ಬರಿ 17.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಚೆನ್ನೈ ತಂಡವನ್ನು ರಾಯಲ್ ಚಾಲೆಂಜರ್ಸ್ ಹಿಂದಿಕ್ಕುವ ಮೂಲಕ ಈಗ ಅಗ್ರಸ್ಥಾನಕ್ಕೇರಿದೆ.
RCB 17.8 ಮಿಲಿಯನ್ ಫಾಲೋವರ್ಸ್ ಗಳಿಸುವ ಮೂಲಕ ಇನ್ ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದ ನಂಬರ್ 1 ತಂಡವಾಗಿ ಹೊರಹೊಮ್ಮಿದ್ದು ಇದೇ ಸಂತಸದಲ್ಲಿರುವ ಅಭಿಮಾನಿಗಳು, ಈ ಸಲ ಕಪ್ ನಮ್ದು ಅಂತ ಸಂಭ್ರಮಿಸಿದ್ದಾರೆ.