Kannada NewsKarnataka NewsLatest

ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ರಸೀದಿ ಪುಸ್ತಕ ಪೂಜಾ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ರಾಮಜನ್ಮಭೂಮಿ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ರಸೀದಿ ಪುಸ್ತಕ ಪೂಜಾ ಕಾರ್ಯಕ್ರಮ ಶಾಹುನಗರದ ಮಹದೇವ ಮಂದಿರದಲ್ಲಿ ಸೋಮವಾರ ನಡೆಯಿತು.
ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಆಶ್ರಯದಲ್ಲಿ ಮೊತ್ತ ಸಮರ್ಪಣೆ ಮಾಡುವ ವ್ಯಕ್ತಿಗಳನ್ನು ಸಂಪರ್ಕಿಸುವ ಸಲುವಾಗಿ ನಡೆದ ಈ ಪೂಜಾ ಕಾರ್ಯಕ್ರಮದ ಸಾನಿದ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ವಹಿಸಿದ್ದರು.
  ಹಿರಿಯ ಸ್ವಯಂಸೇವಕರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಅನಿಲ ಬೆನಕೆ, ಪರಮೇಶ್ವರ ಹೆಗಡೆ, ಅಶೋಕ ಶಿಂತ್ರೆ, ಕೃಷ್ಣ ಭಟ್, ಶ್ರೀಕಾಂತ ಕದಂ, ವಿಜಯ ಜಾಧವ, ವಾಣಿ ರಮೇಶ್, ಸತೀಶ್ ಮಾಳೋದೆ,ಅನೂಪ್ ಕಾಟೆ, ಬಸವರಾಜ ಹಳಿಂಗಳಿ, ಶಿವಬಸಪ್ಪ ಬಾವಿ, ಸಚಿನ್ ಸಬನೀಸ್ ಮೊದಲಾದವರು ಭಾಗವಹಿಸಿದ್ದರು.

Related Articles

Back to top button