Wanted Tailor2
Cancer Hospital 2
Bottom Add. 3

ಪ್ರಸಿದ್ಧ ಹೊಟೆಲ್ ಉದ್ಯಮಿ ಸುರೇಶ ನಾಯರಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹರ್ಷಾ ಹೊಟೇಲ್, ಶಬರಿ ಹೊಟೇಲ್‌, ಸಾಯಿ ಶಬರಿ ಹೊಟೆಲ್ ಗಳ ಮಾಲಕರಾಗಿದ್ದ ಸುರೇಶ ಗಣಪಯ್ಯ ನಾಯರಿ(52) ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.

ಇಲ್ಲಿಯ ರಾಮತೀರ್ಥ‌ನಗರ ನಿವಾಸಿಯಾಗಿದ್ದ ಸುರೇಶ ಮೂಲತಃ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದವರಾಗಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಶ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ‌ ಫಲಿಸದೇ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಅಂತ್ಯಕ್ರಿಯೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ನ.‌ 14ರಂದು ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುರೇಶ ನಾಯರಿ ಅವರು 1971ರಲ್ಲಿ ಜನಿಸಿದ್ದು,1987ರಲ್ಲಿ ಅಣ್ಣನೊಂದಿಗೆ ಬೆಳಗಾವಿಯಲ್ಲಿ ಪಾನ್ ಅಂಗಡಿ ಹಾಗೂ ಟೀ ಸ್ಟಾಲಿನಲ್ಲಿ ಕೆಲಸ ಆರಂಭಿಸಿದರು. 1991ರಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು.

ಆಟೋ ನಗರದಲ್ಲಿ 2001ರಲ್ಲಿ ಹರ್ಷಾ ಫ್ಯಾಮಿಲಿ ರೆಸ್ಟೊರೆಂಟ್, ರಾಮದೇವ ಹೊಟೇಲ್ ಪಕ್ಕದಲ್ಲಿ 2013ರಲ್ಲಿ ಶಬರಿ ಹೊಟೇಲ್, ಶಿವಬಸವ ನಗರದ ಕೆಪಿಟಿಸಿಎಲ್ ಸಭಾಭವನ ಎದುರು 2019ರಲ್ಲಿ ಶ್ರೀ ಸಾಯಿ ಶಬರಿ ಹೊಟೇಲ್ ಆರಂಭಿಸಿದರು.

ಆಟೋ ನಗರದ ಮೊದಲಿನ ಹರ್ಷಾ ಹೊಟೇಲ್ ಅತ್ಯಾಧುನಿಕ ಸೌಲಭ್ಯವುಳ್ಳ, ಹೊಸ ವಿನ್ಯಾಸದೊಂದಿಗೆ ಮೇ‌ 25ರಂದು ಲೋಕಾರ್ಪಣೆಯಾಗಿದೆ. ಗುರು ವಿವೇಕಾನಂದ ಸೊಸೈಟಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.‌

Bottom Add3
Bottom Ad 2

You cannot copy content of this page