Film & Entertainment

*ಎಲ್ಲವೂ ಹಣೆಬರಹ…ನಟ ಶಿವರಾಜ್ ಕುಮಾರ್ ಬೇಸರ…*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಸೇರಿರುವ ವಿಚಾರವಾಗಿ ನಟ ಶಿವರಾಜ್ ಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಶಿವರಾಜ್ ಕುಮಾರ್, ಇಂಥಹ ಘಟನೆಗಳು ನಡೆಯುತ್ತಿರುತ್ತವೆ ನಾವು ಏನೂ ಮಾಡಲು ಆಗಲ್ಲ. ಆದರೆ ಎರಡೂ ಕುಟುಂಬಗಳಿಗೆ ಇದರಿಂದ ಸಾಕಷ್ಟು ನೋವಾಗಿದೆ. ರೇಣುಕಾಸ್ವಾಮಿ ಕುಟುಂಬ ಹಾಗೂ ದರ್ಶನ್ ಕುಟುಂಬ ಎರಡೂ ಕುಟುಂಬಕ್ಕೂ ನೋವಾಗಿದೆ. ನ್ಯಾಯ ಸಿಗಲಿ ಎಂದು ಹೇಳಿದರು.

ಇಂತಹ ಘಟನೆ ನಡೆದಾಗ ನಾವು ಮಾತನಾಡಕೆ ಹೋದರೂ ಯೋಚಿಸಬೇಕು. ಹಣೆಬರಹ ಅಂತ ಒಂದಿರುತ್ತೆ. ಆದರೆ ನಾವು ಮಾಡುತ್ತಿರುವುದು ಸರಿಯೇ? ಎಂಬುದನ್ನು ಮೊದಲು ಯೋಚಿಸಬೇಕು. ಅದನ್ನು ಹೊರತುಪಡಿಸಿ ಇನ್ನೇನು ಹೇಳಲು ಆಗಲ್ಲ ಎಂದು ಹೇಳಿದರು.

ಈ ರೀತಿ ಆದಾಗ ಬೇಸರವಾಗುತ್ತೆ. ಯಾಕಪ್ಪ ಹೀಗೆಲ್ಲ ಆಯಿತು ಎಂದು ನೋವಾಗುತ್ತೆ. ತನಿಖೆ ನಡೆಯುತ್ತಿದೆ. ಏನಾಗುತ್ತೆ ನೋಡೋಣ. ನ್ಯಾಯ ಏನಿದೆ ಅದೇ ಆಗುತ್ತೆ ಅಷ್ಟೆ ಇನ್ನೇನೂ ಹೇಳಲ್ಲ, ಎಲ್ಲವೂ ಹಣೆಬರಹ ಅಷ್ಟೇ ಎಂದು ಹೇಳಿದರು.

Related Articles

Back to top button