Kannada News

ಅನ್ನಭಾಗ್ಯ ಅಕ್ಕಿ ವಶ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಬೀಡಿ ಗ್ರಾಮದಿಂದ ಚನ್ನಮ್ಮನ ಕಿತ್ತೂರು ಪಟ್ಟಣದತ್ತ ಸಾಗಿಸುತ್ತಿದ್ದ ೨೫ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ನಂದಗಡ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
 ಖಚಿತ ಮಾಹಿತಿ ಮೇಲೆ ಬೀಡಿ -ಕಿತ್ತೂರು ರಸ್ತೆಯ ಮೇಲೆ ಸಂಚರಿಸುತ್ತಿರುವ ವಾಹನಗಳ ತಪಾಸಣೆ ಕೈಗೊಂಡ ಪೊಲೀಸರಿಗೆ ಬೈಲಹೊಂಗಲ ನೊಂದಣಿಯ ಟಾಟಾ ಏಸ್ ವಾಹನದಲ್ಲಿ ಪಡಿತರ ವಿತರಣೆಗಾಗಿ ಮೀಸಲಿದ್ದ ಅಕ್ಕಿಯನ್ನು ಸಾಗಿಸುತ್ತಿದ್ದು ಕಂಡುಬಂದದ್ದರಿಂದ ವಾಹನ ಮತ್ತು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚ.ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮದ ಶಿವಾನಂದ ಕಡತನಾಳ ಮತ್ತು ಸುರೇಶ ಕಡತನಾಳ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button